ಕೊಹ್ಲಿ 33ನೇ ಶತಕ, ಭಾರತ ಶುಭಾರಂಭ…

Date:

ನಾಯಕ ವಿರಾಟ್ ಕೊಹ್ಲಿ ಅವರ 33ನೇ ಏಕದಿನ ಶತಕ ( 112) ಮತ್ತು ಅಜಿಂಕ್ಯಾ ರಹಾನೆ  ಅರ್ಧಶತಕದ (79) ನೆರವಿನಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗಳ ವಿರಾಟ ವಿಜಯ ದಾಖಲಿಸಿತು.
ಡರ್ಬನ್ ನ ಕಿಂಗ್ಸ್ ಮೀಡ್ ಮೈದಾನದಲ್ಲಿ ನಡೆದ ಆರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಿದೆ.


ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ದ. ಆಫ್ರಿಕಾ ನಾಯಕ ಡು ಪ್ಲೆಸಿಸ್ ಶತಕ ( 120) ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ8 ವಿಕೆಟ್ ನಷ್ಟಕ್ಕೆ 269 ರನ್ ಗಳನ್ನು ಮಾಡಿತು.


270ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ( 20) , ಶಿಖರ್ ಧವನ್ ( 35) ಹೇಳಿಕೊಳ್ಳುವಂತಹ ಆರಂಭವನ್ನು ನೀಡುವಲ್ಲಿ ವಿಫಲರಾದರು.‌ ತಂಡದ ಮೊತ್ತ 33 ಆದಾಗ ರೋಹಿತ್ ಪೆವಿಲಿಯನ್ ಸೇರಿದ್ರು. 67 ರನ್ ಆಗುವಷ್ಟರಲ್ಲಿ ಧವನ್ ರನ್ ಔಟ್ ಗೆ ಬಲಿಯಾದ್ರು.


ನಂತರ ಶುರುವಾಗಿದ್ದು ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ಆರ್ಭಟ. ಈ ಜೋಡಿ‌ 189ರನ್ ಗಳ ಜೊತೆಯಾಟ ಆಡಿ ಗೆಲುವನ್ನು ಖಾತ್ರಿ ಪಡಿಸಿತು. ಆದರೆ,‌ಗೆಲುವಿನ‌ ದಡ ಸೇರುವಷ್ಟರಲ್ಲಿ ರಹಾನೆ ಮತ್ತು ವಿರಾಟ್ ಔಟ್…!
ನಂತರ ಬಂದ ಹಾರ್ದಿಕ್ ಪಾಂಡ್ಯ (3) ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋ‌ನಿ (4) ತಂಡವನ್ನು‌ ಗುರಿ ತಲುಪಿಸಿದರು.
ಭಾರತ ಟೆಸ್ಟ್ ಸರಣಿಯನ್ನು ಸೋತಿದೆ. ಏಕದಿನ ಸರಣಿ ಗೆದ್ದು ಸೇಡು‌‌ ತೀರಿಸಿಕೊಳ್ಳಲು ಎದುರು ನೋಡುತ್ತಿದೆ. 4-2 ಅಂತರದಲ್ಲಿ ಸರಣಿ ಗೆದ್ದಲ್ಲಿ‌ ಆತಿಥೇಯ ದ. ಆಫ್ರಿಕಾ ವನ್ನು ಹಿಂದಿಕ್ಕಿ ನಂಬರ್‌‌‌ 1 ಪಟ್ಟ ಅಲಂಕರಿಸಲಿದೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...