ಕೊಹ್ಲಿ ಮತ್ತೊಂದು ದಾಖಲೆ…!

admin
By admin
1 Min Read

ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದ ಬೆನ್ನಲ್ಲೇ ಕೊಹ್ಲಿ ಮತ್ತೊಂದು ದಾಖಲೆಯನ್ನು ‌ಮಾಡಿದ್ದಾರೆ.


ಟೀಂ ಇಂಡಿಯಾದ ಮಾಜಿ ನಾಯಕ ಸುನೀಲ್ ಗವಸ್ಕಾರ್ ಅವರ ಬಳಿಕ‌ ಟೆಸ್ಟ್ ಕ್ರಿಕೆಟ್ ನಲ್ಲಿ‌ 900 ರೇಟಿಂಗ್ ಪಾಯಿಂಟ್ ಗಳಿಸಿದ ಮೊದಲ‌ ಭಾರತೀಯ ಕ್ರಿಕೆಟಿಗರಾಗಿ ಕ್ಯಾಪ್ಟನ್ ಕೊಹ್ಲಿ ಹೊರ ಹೊಮ್ಮಿದ್ದಾರೆ.

1979ರಲ್ಲಿ ಗವಾಸ್ಕರ್ ಇಂಗ್ಲೆಂಡ್ ‌ನಲ್ಲಾಡಿದ ತಮ್ಮ 50 ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಐಸಿಸಿ ರ್ಯಾಕಿಂಗ್ ನಲ್ಲಿ 916 ಪಾಯಿಂಟ್ ಗಳಿಸಿದ್ದರು.


ಕೊಹ್ಲಿ ಇತ್ತೀಚೆಗೆ ನಡೆದ ದ. ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಶತಕ (153) ಸಿಡಿಸಿದ್ದು, ಇದೀಗ 900 ಪಾಯಿಂಟ್ ಪಡೆದು 3ರಿಂದ 2ನೇ ರ್ಯಾಂಕ್ ಗೆ ಏರಿದ್ದಾರೆ.

Share This Article