ಮಾತಿಲ್ಲದ ಮೆರುಗು

1
200

ಗಿರವಿಗಿಟ್ಟಿದ್ದ ಗಡಿಯಾರ
ಇಂದೇಕೋ ಮುಂದಿನ ದಿನವ
ನೆನೆದು ಅಳುತ್ತಲಿತ್ತು
ಯೌವ್ವನದ ಅಮಲಲ್ಲಿ
ಅಂಬಿಗನಿಲ್ಲದ ದೋಣಿಯನೇರಿ
ಕುಂತವನು ತಂತ್ರ-ಕುತಂತ್ರಗಳ
ಮಂತ್ರಗಳ ಜಪಿಸುವ
ಜಗವ ಶಪಿಸುತ ಕಾಲಹರಣವ
ಮಾಡುತಲಿರುವ
ಕಾವ್ಯದತ್ತ ನುಡಿವನಿಲ್ಲಿ
ಮಾತು ಮಾತಿಗೆ
ಜೋತು ಬೀಳುವ ಬದಲು
ಮೌನದಿ ಕೂತು ಗೆಲುವ
ಸೇತುವೆಯನೇರುವ
ಯೋಜನೆಯ ರೂಪಿಸುವ.
✍?ದತ್ತರಾಜ್ ಪಡುಕೋಣೆ✍?

1 COMMENT

LEAVE A REPLY

Please enter your comment!
Please enter your name here