ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೊಸ ಅವತಾರ ಎತ್ತಿದ್ದಾರೆ. ಸೆಹ್ವಾಗ್ ಈಗ ಬಾಬಾ…!
ಹೌದು, ಸೆಹ್ವಾಗ್ ಬಾಬಾ ಆಗುದ್ದಾರೆ. ಆದರೆ, ರಿಯಲ್ಲಾಗಿ ಅಲ್ಲ, ಹಾಗೇ ಸುಮ್ಮನೆ ಬಾಬಾ ವೇಷ ಹಾಕಿ ಟ್ವಿಟ್ಟರ್ ನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
Guru karna jaan kar, Paani peena chaan kar .
Jai Bhole ! Jai Shri Ram ! Jai Bajrangbali ! pic.twitter.com/9utbMVP08z— Virender Sehwag (@virendersehwag) August 3, 2018
ಸೆಹ್ವಾಗ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿರ್ತಾರೆ. ಅವರ ಬಹುತೇಕ ಪೋಸ್ಟ್ ಗಳು ಹೀಗೆ ವೈರಲ್ ಆಗುತ್ತವೆ, ಸುದ್ದಿಯಾಗುತ್ತವೆ. ಈ ಹಿಂದೆಯೂ ಅನೇಕಬಾರಿ ಸ್ನೇಹಿತರ, ಕ್ರಿಕೆಟಿಗರ ಕಾಲೆಳೆದು ಟ್ವೀಟ್ ಮಾಡಿದ್ದರು.
ಈಗ ಬಾಬಾ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಗುರು ಕಾರ್ನಾ ಜಾನ್ ಕರ್, ಪಾನಿ ಪೀನಾ ಚಾನ್ ಕರ್. ಜೈ ಭೋಲೆ! ಜೈ ಶ್ರೀ ರಾಮ್! ಜೈ ಬಜರಂಗಬಲಿ! ಎಂದು ಸ್ವಾಮೀಜಿ ಶೈಲಿಯಲ್ಲಿ ಫೋಟೋಗೆ ಅಡಿ ಬರಹ ಬರೆದು ಗಮನ ಸೆಳೆದಿದ್ದಾರೆ.