ಅವನು ತನ್ನೆರಡೂ ಕೈಗಳನ್ನು ಕಳಕೊಂಡ್ರೂ ದೇಶ ಹೆಮ್ಮೆ ಪಡೋ ಛಲಗಾರನಾದ

Date:

ಅವನು 10 ವರುಷದವನಾಗಿದ್ದಾಗ,ಪ್ರವಹಿಸುತ್ತಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದು ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿದ್ದ,ಅವನನ್ನು ಬದುಕಿಸಲು ಧಾವಿಸಿ ಹೋದ ಅವನ ತಂದೆಯು ಸ್ವತ:ತಾವೆ ಬಲಿಯಾದ್ರು.ಆ ಹುಡುಗ ಎರಡು ತಿಂಗಳು ಕೋಮಾದಲ್ಲಿದ್ದು,ಮತ್ತೆ ಬದುಕಿನತ್ತ ಮರಳಿ ಬಂದಾಗ ಅವನು ಕಂಡಿದ್ದು,ಎಂದಿಗೂ ಮರಳಿ ಬಾರದ ತನ್ನೆರಡೂ ಕೈಗಳನ್ನು.ಇದು ವಿಶ್ವಾಸ್ ಕೆ.ಎಸ್ ಎಂಬ ಹುಡುಗನ ಜೀವನದ ನೈಜ ಕಥೆ.

ಈಗ ಆತ 26 ವರುಷದ ಯುವಕ ಮತ್ತದಲ್ಲದೆ,ತನ್ನ ಬತ್ತಳಿಕೆಯೊಳಕ್ಕೆ 3 ಸ್ಪೀಡೋ ಕೆನಾ ಆಮ್ ಪಾರಾ-ಸ್ವಿಮ್ಮಿಂಗ್ ಚ್ಯಾಂಪಿಯನ್ ಶಿಪ್ (ಕೆನಡಾ,2016)ಮೆಡಲ್ ಗಳನ್ನು ಸೇರಿಸಿಕೊಂಡಿದ್ದಾನೆ.ಕರ್ನಾಟಕದ ಬೆಳಗಾವಿಯಲ್ಲಿ ನಡೆದ ನ್ಯಾಷನಲ್ ಪಾರಾ-ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಅವನ ಸಾಧನೆಯನ್ನು ನೋಡಿದ

ನಮ್ಮ ದೇಶದ ಸ್ಫೋರ್ಟ್ಸ್ ಸಂಸ್ಥೆಯು ಅವನ ಹೆಸರನ್ನು ಕೆನಡಿಯನ್ ಚ್ಯಾಂಪಿಯನ್ ಶಿಪ್ ಗಾಗಿ ದಾಖಲಿಸಿತ್ತು.

ಭೀಕರ ಅಪಘಾತದ ಬಳಿಕ  ವಿಶ್ವಾಸ್ ನ ಕುಟುಂಬವು ಬೆಂಗಳೂರಿನಲ್ಲಿ ಬಂದು ನೆಲಸಿತ್ತು.ಅವನು ವಿಜಯನಗರದ ಬಸವೇಶ್ವರ ಕಾಲೇಜಿನಲ್ಲಿ ತನ್ನ ಪದವಿಯನ್ನು ಮುಗಿಸಿ,ಹಲವು ಕೆಲಸಗಳನ್ನು ಮಾಡುತ್ತಿದ್ದನೆನ್ನಲಾಗಿದೆ.

ಕೈಗಳಿಲ್ಲದೆ,ಅವನು ಪಟ್ಟ ಪಾಡು ಅವಮಾನ ಇದ್ಯಾವುದೂ ಅವನ ಸಾಧನೆಯ ಹಾದಿಯಲ್ಲಿ ಅಡ್ಡಿ ಬರಲಿಲ್ಲ ‍ಬದಲಾಗಿ ಇಲ್ಲಿಯತನಕ ಅವನು ಬಂದು ತಲಪಲು ಸಾಧ್ಯವಾಯಿತು.ಆತನು ಕರಾಟೆ ಮತ್ತು ನೃತ್ಯ ಅಭ್ಯಾಸದಲ್ಲಿ ತರಬೇತಿ ಪಡೆಯುತ್ತಿದ್ದರೂ ಈಜುಗಾರಿಕೆಯಲ್ಲಿ ವಿಶೇಷ ಆಸಕ್ತಿ ಇದ್ದುದರಿಂದ ಅದನ್ನೇ ತನ್ನ ಜೀವನದ ಧ್ಯೇಯವಾಗಿಸಿದ.ಈ ನಿಟ್ಟಿನಲ್ಲಿ ತನ್ನ ಕನಸನ್ನು ನನಸಾಗಿಸಲು, ಆತ ಆಸ್ತಾ ಎಂಬ ಹೆಸರಿನ ಎನ್.ಜಿ.ಓ ದ ಸ್ಥಾಪಕರಾಗಿರೋ ಸುನಿಲ್ ಜೈನ್ ಬಳಿ ಸಹಾಯ ಪಡೆದು ಒಬ್ಬ ಪ್ರಖ್ಯಾತ ಈಜುಗಾರನಾಗಲು ಪ್ರಯತ್ನ ಪಟ್ಟು ಈ ನಿಟ್ಟಿನಲ್ಲಿ ಜಯ ಸಾಧಿಸಿದ.

ತನ್ನ ಹೆಸರಿನಂತೆಯೇ ವಿಶ್ವಾ‍ಸ್ ತನ್ನಲ್ಲಿರೋ ಬುದ್ದಿವಂತಿಕೆಯ ಮೇಲೆ ಅಪಾರ ವಿಶ್ವಾಸ ಇಟ್ಟವನು.ಈ ನಿಟ್ಟೀನಲ್ಲಿ ಆತ ತನ್ನ ಕನಸನ್ನು ಈ ರೀತಿ ವ್ಯಕ್ತ ಪಡಿಸುತ್ತಾನೆ.

“ನನ್ನ ಕನಸು 2020 ರಲ್ಲಿ ಟೋಕ್ಯೋದಲ್ಲಿ ನಡೆಯಲಿರೋ ಒಲಿಂಪಿಕ್ ನಲ್ಲಿ ಭಾಗವಹಿಸುವುದಾಗಿದೆ” ಎನ್ನುತ್ತಾನೆ

ಉತ್ತಮ ಸಹಕಾರ ಮತ್ತು ಆತ್ಮ ವಿಶ್ವಾಸವು ಯಾರನ್ನಾಗಲೀ ಪ್ರಚೋದಿಸುತ್ತದೆ ಎಂದು ನಂಬಿದ್ದಾನೆ ವಿಶ್ವಾಸ್.

“ನನ್ನನ್ನು ಇಲ್ಲಿಯ ತನಕ ತಲಪುವಂತೆ ಮಾಡಿದ ಅರ್.ಪಿ.ಸಿ ಈಜು ಕೊಳದ  ಹಿರಿಯ ನಾಗರಿಕರಿಗಾಗಿ ನನ್ನ ಈ ಜಯ ಅವರಿಗಾಗಿ

 ಸಮರ್ಪಿತ” ಎಂದು ಮನ ತುಂಬಿ ಹೇಳುತ್ತಾನೆ ವಿಶ್ವಾಸ್.

ವಿಶ್ವಾಸ ತನ್ನ ಛಲದಂತೆ ಹಿಡಿದ ಹಟವನ್ನು ಸಾಧಿಸಿಯೇ ಸಾಧಿಸುತ್ತಾನೆ ಎಂಬ ವಿಶ್ವಾಸ ನಮ್ಮಲ್ಲಿದೆ.ಬೆಸ್ಟ್ ಆಫ್ ಲಕ್ ‍ಟು ಯೂ ವಿಶ್ವಾಸ್.

  • ಸ್ವರ್ಣಲತ ಭಟ್

POPULAR  STORIES :

ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!

ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!

ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!

ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

 

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...