ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಉಚಿತ ಡಾಟಾ, ಅನ್‌ಲಿಮಿಟೆಡ್ ಕಾಲ್ ಮೂಲಕ ಹೊಸ ಅಲೆ ಸೃಷ್ಟಿಸಿರೋ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ದಿನ ಹೊಸ ಹೊಸ ಆಫರ್ ನೀಡುತ್ತಲೇ ಬರುತ್ತಿದೆ. ಈ ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ ನೂತನ ಆಫರ್ ನೊಂದಿಗೆ ಬಂದಿದೆ.
ವೋಡಾಫೋನ್ ಇದೀಗ 99 ರೂಪಾಯಿ ಹಾಗೂ 109 ರೂಪಾಯಿಗಳ ರಿಚಾರ್ಜ್ ಆಫರ್ ನೀಡಿದೆ. ಈ ಆಫರ್ ನಂತೆ ಗ್ರಾಹಕರು 28 ದಿನಗಳವರೆಗೆ ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಹಾಗೂ ರೋಮಿಂಗ್ ಕಾಲ್ ಸೌಲಭ್ಯ ಪಡೆಯುತ್ತಾರೆ .
109 ರೂಪಾಯಿಗಳ ರಿಚಾರ್ಜ್‌ನಲ್ಲಿ ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಹಾಗೂ ರೋಮಿಂಗ್ ಕಾಲ್ ಮತ್ತು 1ಜಿಬಿ ಡಾಟಾ ಸೇವೆಯನ್ನ ಪಡೆಯಬಹುದಾಗಿದೆ.
ಹೀಗೆ ಜಿಯೋಗೆ ವೋಡೋಫೋನ್ ಸೆಡ್ಡು ಹೊಡೀತಿದೆ.