ತಮಾಷೆಗೆ ಆಡಿದ ಆ ಒಂದು ಮಾತು ನನ್ನ ಹಾಗೆ ಧೋನಿ ನಡುವಿನ ಸಂಬಂಧಕ್ಕೆ ಬೆಂಕಿ ಇಟ್ಟಿತ್ತು.!! ಏನದು ಗೊತ್ತಾ..?
ವಿವಿಎಸ್ ಲಕ್ಷಣ ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಕ್ರಿಕೆಟಿಗ.. ತನ್ನ ಈ ವೃತ್ತಿ ಬದುಕಿನಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ನಗುಮೊಗದಲ್ಲಿ ತನ್ನ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬಾಯ್ ಹೇಳಿದ್ರು.. ಗಂಗೂಲಿ, ಸಚಿನ್, ದ್ರಾವಿಡ್ ಜೊತೆಗೆ ಮಾತ್ರವಲ್ಲದೇ ಧೋನಿ ನಾಯಕನಾದ ನಂತರವು ತಂಡವನ್ನ ಪ್ರತಿನಿಧಿಸಿದ್ರು ವಿವಿಎಸ್ ಲಕ್ಷ್ಮಣ್..
ಸದ್ಯ ಲಕ್ಷ್ಮಣ್ ಅವರ ಆತ್ಮಕಥೆ ‘281 ಆ್ಯಂಡ್ ಬಿಯಾಂಡ್ ಬಗ್ಗೆ ಚರ್ಚೆ ನಡೆಯುತ್ತಿದೆ.. ಇದರಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರ ಜೊತೆಗಿನ ಹಲವು ಘಟನೆಗಳ ಬಗ್ಗೆ ಬರೆದಿದ್ದಾರೆ. ಇದರಲ್ಲಿ ಧೋನಿಯೊಂದಿಗೆ ತನ್ನ ಒಡನಾಟದ ಬಗ್ಗೆಯೂ ಲಕ್ಷ್ಮಣ್ ಬರೆಯೋದನ್ನ ಮರೆತಿಲ್ಲ.. ಧೋನಿಯಂತಹ ಉತ್ತಮ ವ್ಯಕ್ತಿತ್ವದ ನಾಯಕನನ್ನ ನಾನು ನೋಡಿಲ್ಲ ಎಂದಿದ್ದಾರೆ..
ಅಷ್ಟೆ ಅಲ್ಲ ಧೋನಿ ನಾಯಕನಾದ ಬಳಿಕ ಅವರ ರೂಮ್ ಡೋರ್ ಎಂದು ಕ್ಲೋಸ್ ಆಗಿ ಇರುತ್ತಿರಲಿಲ್ಲ.. ಯಾರು ಬೇಕಾದರು ಅವರನ್ನ ಹೋಗಿ ಮೀಟ್ ಮಾಡಿ ಮಾತನಾಡಬಹುದಿತ್ತು.. ಅದು ರಾತ್ರಿಯಾದರು… ಇನ್ನು ವಿವಿಎಸ್ ಲಕ್ಷ್ಮಣ್ ತಮ್ಮ ನಿವೃತ್ತಿಯ ಬಗ್ಗೆ ಮಾಧ್ಯಮಗಳಿಗೆ ಹೇಳುವ ಸಂದರ್ಭದಲ್ಲಿ, ಮಾಧ್ಯಮಗಳು ನನ್ನ ಎಂದು ಪ್ರಶ್ನೆ ಕೇಳಿದ್ವು.. ಅದೇ ಧೋನಿಗೆ ಈ ಬಗ್ಗೆ ಹೇಳಿದ್ದೀರಾ..
ಆಗಾ ನಾನು ತಮಾಷೆಗೆ ಧೋನಿ ಬಳಿ ತಲುಪುದು ಅದೆಷ್ಟು ಕಷ್ಟ ಎಂದು ಎಲ್ಲರಿಗು ತಿಳಿದಿದೆ ಎಂದು ಹೇಳಿದೆ.. ಆದರೆ ಅದರ ಅರ್ಥ ಬೇರೆ ರೂಪವನ್ನು ಪಡೆದುಕೊಂಡಿತ್ತು.. ನನ್ನ ಹಾಗೆ ಧೋನಿ ನಡುವೆ ಭಿನ್ನಾಭಿಪ್ರಾಯ ಇದೆ, ಹೀಗಾಗೆ ಲಕ್ಷ್ಮಣ್ ಅವರು ವಿಧಾಯ ಹೇಳುತ್ತಿದ್ದಾರೆ ಅಂತೆಲ್ಲ ಸುದ್ದಿಯಾಯ್ತು.. ಇದು ನನಗೆ ತುಂಬಾ ಬೇಸರವನ್ನ ಉಂಟು ಮಾಡಿತ್ತು ಎಂದಿದ್ದಾರೆ.. ಸದ್ಯ ಈಗ ಲಕ್ಷ್ಮಣ್ ಅವರು ಈ ವಿಚಾರವನ್ನ ಪ್ರಸ್ತಾಪಿಸಿ, ಧೋನಿಯವರಿಂದಲೇ ಲಕ್ಷ್ಮಣ್ ಕ್ರಿಕೆಟ್ ಗೆ ಗುಡ್ಬಯ್ ಹೇಳಿದ್ರು ಎಂಬುದು ಸುಳ್ಳಲಾಗಿದೆ..