ಮನೆಮನೆಗೆ ಪೇಪರ್ ಹಾಕ್ತಿದ್ದ ಹುಡುಗ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟಾಪ್ .3 ! 34 ವರ್ಷದಲ್ಲಿ ಗಳಿಸಿದ್ದು 4027429350000 ರೂಪಾಯಿ..! 

Date:

ಆ ಹುಡುಗನಿಗೆ ಅದೆಂತದ್ದೋ ವಿಶೇಷ ಆಸಕ್ತಿ ಇತ್ತು. ಅವನು ಡಿಸೈಡ್ ಮಾಡಿಬಿಟ್ಟಿದ್ದ, `ನಾನು ವಿಶ್ವದ ಶ್ರೀಮಂತರ ಪಟ್ಟಿ ಸೇರಿಯೇ ಸೇರುತ್ತೇನೆ’ ಅಂತ..! ಅದರಂತೆಯೇ ಸೇರಿಯೇ ಬಿಟ್ಟರು..! ಆದ್ರೆ ಆ ಹಾದಿ ಅಷ್ಟು ಸುಲಭವಿರಲಿಲ್ಲ. `ನಾನಿನ್ನು ಸ್ವಾವಲಂಭಿಯಾಗಿ ಬದುಕಬೇಕು, ನನ್ನ ಖರ್ಚ್ ನಾನೇ ನೋಡಿಕೊಳ್ಳಬೇಕು’ ಅಂತ ಡಿಸೈಡ್ ಮಾಡಿದ್ದಾಗ ಅವರ ವಯಸ್ಸು ಕೇವಲ 9 ವರ್ಷ..!

 

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವರಪ್ಪ ಅಮೆರಿಕ ಕಾಂಗ್ರೆಸ್ ನಲ್ಲಿ ದೊಡ್ಡ ಹೆಸರು ಮಾಡಿದ್ದ ವ್ಯಕ್ತಿ. ಅದ್ರೆ ಅವರ ಮಗನಾದವನಿಗೆ ಅಪ್ಪನ ನೆರಳಲ್ಲಿ ಡಿಪೆಂಡ್ ಆಗಿ ಬದುಕೋದು ಇಷ್ಟವಿರಲಿಲ್ಲ..! ಸೋ, ಒಂಭತ್ತನೇ ವಯಸ್ಸಲ್ಲೇ ಸ್ವಾವಲಂಭಿ ಬದುಕು ಆರಂಭಿಸಿಬಿಟ್ಟ. ಚ್ಯೂಯಿಂಗ್ ಗಮ್ ಮಾರೋದು, ಕೋಕಾಕೋಲಾ ಬಾಟಲಿಗಳನ್ನು ಮಾರೋದು, ಮನೆಮನೆಗೆ ಹೋಗಿ ಪೇಪರ್ ಹಾಕೋದು, ಹೀಗೆ ಏನೇನೆಲ್ಲಾ ಮಾಡೋಕೆ ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡ್ತಿದ್ದ..! 11ನೇ ವಯಸ್ಸಿನಲ್ಲೇ ಅವನ ಕಣ್ಣು ಬಿದ್ದಿದ್ದು ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ಮೇಲೆ. ಷೇರು ಮಾರುಕಟ್ಟೆ ಅಂದ್ರೆ ಏನು ಅಂತ ಜನ ಇನ್ನೂ ತಲೆಕೆರೆದು ಕೋಲ್ತಿದ್ದ ಟೈಮಲ್ಲಿ, ಈ ಹುಡುಗ ಷೇರು ಮಾರ್ಕೆಟ್ ಮೇಲೆ ಇನ್ವೆಸ್ಟ್ ಮಾಡೋ ಐಡಿಯಾ ಹಾಕಿದ್ದ. ಅವನ ಹಾಗೂ ಅವನ ತಂಗಿಯ ಹೆಸರಲ್ಲಿ ತಲಾ ಮೂರು ಷೇರುಗಳನ್ನು ಕೊಂಡುಕೊಂಡ. ಅಲ್ಲಿಂದ ಆರಂಭವಾಯ್ತು ಅವನ ಷೇರು ಮಾರುಕಟ್ಟೆಯ ಯಶೋಗಾಥೆ..! ಇವತ್ತು ಅವರು ವಿಶ್ವದ ನಂಬರ್ 3 ಶ್ರೀಮಂತ..! ಅಮೆರಿಕದ ವಾರೆನ್ ಬಫೆಟ್..!
ಬಫೆಟ್ ಮೊದಲ ಬಾರಿ ಟ್ಯಾಕ್ಸ್ ರಿಟರ್ನ್ ಅವರ 14ನೇ ವಯಸ್ಸಿನಲ್ಲಿ ಅಂದ್ರೆ ನಂಬ್ತೀರಾ..? ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಏಜೆನ್ಸಿ ಪಡೆದು, ಒಂದಷ್ಟು ಹುಡುಗರನ್ನು ಜೊತೆಗೆ ಸೇರಿಸಿಕೊಂಡು, ಅವರ ಜೊತೆ ಇವರೂ ಮನೆಮನೆಗೆ ಹೋಗಿ ಪೇಪರ್ ಹಾಕುತ್ತಿದ್ರು. ಆ ಕಾಲಕ್ಕೆ, ಪ್ರತಿದಿನ 175 ಡಾಲರ್ ಉಳಿಸೋರಂತೆ..! ಪರಿಣಾಮವಾಗಿ ಒಂದಷ್ಟು ಹಣ ಉಳಿಸಿ 14ನೇ ವಯಸ್ಸಿನಲ್ಲೇ 40 ಎಕರೆ ಜಾಗ ಸ್ವಂತ ದುಡ್ಡಲ್ಲಿ ಖರೀದಿಸಿದ್ರಂತೆ ವಾರೆನ್ ಬಫೆಟ್..!
1951ರಿಂದ 1970ರವರೆಗೆ ಮೂರು ಬೇರೆಬೇರೆ ಕಂಪನಿಗಳನ್ನು ಹುಟ್ಟುಹಾಕಿದ್ರು ಬಫೆಟ್. ಎಲ್ಲವು ಅದ್ಭುತವಾಗಿ ಸಕ್ಸಸ್ ಪಡೆದವು..! ಎಲ್ಲವೂ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಬಿಸಿನೆಸ್ ಗಳೇ..! ಯಾವಾಗ ಬಫೆಟ್ ಬಾಕರ್್ ಶೈರ್ ಹ್ಯಾಥವೇ ಕಂಪನಿಯ ಷೇರುಗಳನ್ನು ಕೊಂಡುಕೊಳ್ಳೋಕೆ ಶುರು ಮಾಡಿದ್ರೋ, ಅಲ್ಲಿಂದ ಆರಂಭವಾಯ್ತು ನೋಡಿ ಶುಕ್ರದೆಸೆ. ಬರೀ ಷೇರುಗಳನ್ನು ಕೊಂಡುಕೊಳ್ಳೋದು ಮಾತ್ರವಲ್ಲದೇ ಕಂಪನಿಯ ಮೇಲೂ ತಮ್ಮ ಪ್ರಭಾವ ಬೀರೋಕೆ ಶುರು ಮಾಡಿ, ಕಂಪನಿಯನ್ನು ಕಂಟ್ರೋಲ್ ಗೆ ತಗೊಂಡ್ರು. ಮೊದಲೇ ಪಕ್ಕಾ ಬಿಸಿನೆಸ್ ಮ್ಯಾನ್. ಆ ಕಾಲಕ್ಕೆ ಅವರು ಪ್ರತೀ ಷೇರು ತಗೊಂಡಿದ್ದು ಕೇವಲ 7.60 ಡಾಲರ್ ಲೆಕ್ಕದಲ್ಲಿ. ಆದ್ರೆ ಹೋಗ್ತಾ ಹೋಗ್ತಾ ಷೇರಿನ ಮೌಲ್ಯ ಏರ್ತಾ ಹೋಯ್ತು. ಯಾವಾಗ ಷೇರಿನ ಮೌಲ್ಯ ಹೆಚ್ಚಾಯ್ತೋ, ಬಫೆಟ್ ಅದರ ಮೆಲಿನ ಇನ್ವೆಸ್ಟ್ ಮೆಂಟ್ ಜಾಸ್ತಿ ಮಾಡಿದ್ರು. ಎಷ್ಟು ಸಾಧ್ಯವಾಗುತ್ತೋ ಅಷ್ಟು ಷೇರುಗಳನ್ನು ಕೊಂಡುಕೊಂಡ್ರು.  ನೀವು ನಂಬಲೇಬೇಕು, 1979ರಲ್ಲಿ ಬಾರ್ಕ್ ಶೈರ್ ಕಂಪನಿಯ ಒಂದು ಷೇರಿಗೆ 775 ಡಾಲರ್ ಇತ್ತು. ಅದೇ ವರ್ಷದ ಕೊನೆಯಲ್ಲಿ ಅದರ ಮೌಲ್ಯ 1,310 ಡಾಲರ್..! ಆಗ ಬಫೆಟ್ ಆಸ್ತಿ ಎಷ್ಟಿತ್ತು ಗೊತ್ತಾ..? ಬರೋಬ್ಬರಿ 4 ಸಾವಿರ ಕೋಟಿ..! ಅದೇ ಮೊದಲ ಬಾರಿಗೆ ವಾರೆನ್ ಬಫೆಟ್ ಫೋರ್ಬ್ಸ್ ಲೀಸ್ಟಲ್ಲಿ `ವಿಶ್ವದ ಟಾಪ್ ಶ್ರೀಮಂತರ ಪಟ್ಟಿ’ ಸೇರಿದ್ರು..!
ಅಷ್ಟರೊಳಗೆ ಬಾರ್ಕ್ ಶೈರ್ ಕಂಪನಿಯನ್ನು ಸಂಪೂರ್ಣ ಹತೋಟಿಗೆ ತಗೊಂಡ ವಾರೆನ್ ಬಫೆಟ್, ಅದರ ಚೇರ್ ಮನ್, ಸಿಇಓ, ಪ್ರೆಸಿಡೆಂಟ್ ಎಲ್ಲವೂ ಆದರು. ವಿಶ್ವದ ಅಮೆರಿಕದ ದೊಡ್ಡದೊಡ್ಡ ಕಂಪನಿಗಳ ಷೇರುಗಳನ್ನು ಪರ್ಚೇಸ್ ಮಾಡಿದ್ರು..! ಪ್ರಸ್ತುತ ಬಾರ್ಕ್ ಶೈರ್ ಹ್ಯಾಥವೇ ಕಂಪನಿ 9 ಕಂಪನಿಗಳನ್ನು ಸ್ವಂತ ಮಾಡಿಕೊಂಡಿದೆ. ಅಮೆರಿಕನ್ ಎಕ್ಸ್ ಪ್ರೆಸ್, ಕೋಕಾಕೋಲಾ, ಐಬಿಎಂ ಕಂಪನಿಯಲ್ಲೂ ಬಫೆಟ್ ತಮ್ಮ ಷೇರುಗಳನ್ನು ಹೊಂದಿದ್ದಾರೆ ಅಂದ್ರ ನಂಬಲೇಬೇಕು.. ಇದೇ ಬಫೆಟ್ ಒಂದು ಕಾಲಕ್ಕೆ ಕೋಕಾಕೋಲವನ್ನು ರಸ್ತೆರಸ್ತೆಯಲ್ಲಿ ಮಾರ್ತಾ ಇದ್ರು,..! ಇವತ್ತು ಅದೇ ಕಂಪನಿಯಲ್ಲಿ ದೊಡ್ಡಮೊತ್ತದ ಷೇರುಗಳನ್ನು ಹೊಂದಿದ್ದಾರೆ… ಅದಕ್ಕೇ ಅಲ್ವೇ ಅವರು ವಾರನ್ ಬಫೆಟ್…!
ಅವತ್ತು ರಸ್ತೆಯಲ್ಲಿ ಸೈಕಲ್ ತುಳಿದು ಮನೆಮನೆಗೆ ಪೇಪರ್ ಹಾಕ್ತಿದ್ದವರು ಇವತ್ತು ಪ್ರತಿದಿನ ದುಡಿಯೋದು ಬರೋಬ್ಬರಿ 300 ಕೋಟಿ ರೂಪಾಯಿಯಷ್ಟು..! ಅವರ ಜೀವನದಲ್ಲಿ ಅವರು ಗಳಿಸಿರೋ ಆಸ್ತಿಯಲ್ಲಿ ಶಕಡಾ 99ರಷ್ಟು ಆಸ್ತಿ ಗಳಿಸಿರೋದು ಅವರ 50ನೇ ವರ್ಷದ ನಂತರ..! ಈಗ ಅವರ ವಯಸ್ಸು 84 ವರ್ಷ, ಕಳೆದ 34 ವರ್ಷದಲ್ಲಿ ಅವರು ಗಳಿಸಿದ ಹಣ 4027429350000 ರೂಪಾಯಿ..!
ಇಷ್ಟೆಲ್ಲಾ ದುಡ್ಡು ಮಾಡಿದ್ರೂ ಅವರು ಯಾವತ್ತೂ ವೈಭವದ ಜೀವನ ಇಷ್ಟಪಡಲೇ ಇಲ್ಲ. ಅವರಿಗೆ ಅವಶ್ಯಕತೆ ಎಷ್ಟಿದಿಯೋ ಅದಕ್ಕಿಂತ ಜಾಸ್ತಿ ಯಾವತ್ತೂ ಬಳಸಿಕೊಂಡಿಲ್ಲ. ಅನವಶ್ಯಕ ಖಚರ್ುಗಳಂತೂ ಯಾವತ್ತಿಗೂ ಮಾಡಿಲ್ಲ. ಇಷ್ಟೊಂದು ದುಡ್ಡು ಮಾಡಿದ ಮೇಲೆ ಏನು ಮಾಡೋದು..? ಬಫೆಟ್ ಏನು ಮಾಡಿದ್ರು ಗೊತ್ತಾ..? ಬಿಲ್ ಗೇಟ್ಸ್ ಫೌಂಡೇಶನ್ ಸೇರಿದಂತೆ ಹಲವು ಫೌಂಡೇಶನ್ ಗಳಿಗೆ ಕೋಟಿ ಕೋಟಿ ದಾನ ಮಾಡಿದ್ರು. ತಮ್ಮ ಬಳಿ ಇದ್ದ ಷೇರುಗಳನ್ನು ಹಂತಹಂತವಾಗಿ ದಾನ ಮಾಡುತ್ತಲೇ ಇದ್ದಾರೆ ವಾರೆನ್ ಬಫೆಟ್..! ಪ್ರತೀ ವರ್ಷ ಅವರು ತಾವು ಮಾಡಿದ ದಾನ ಎಷ್ಟು ಅಂತ ಹೇಳಿದಾಗ ಇಡೀ ವಿಶ್ವವೇ ಕಂಗಾಲಾಗಿ ಹೋಗುತ್ತೆ..!ಕಳೆದ ವರ್ಷ ಅವರು ಬಿಲ್ ಗೇಟ್ಸ್ ಫೌಂಡೇಸನ್ ಗೆ ಮಾಡಿದ ದಾನದ ಮೊತ್ತ 179061260000 ರೂಪಾಯಿ..! ಗಳಿಸೋದಕ್ಕಿಂತ ಹೆಚ್ಚಿನ ಖುಷಿ ಕೊಡೋದ್ರಲ್ಲಿದೆ ಅಂತಾರೆ ವಾರೆನ್ ಬಫೆಟ್..!
ಚಿಕ್ಕವರಿದ್ದಾಗಿನಿಂದ ಅವರಿಗಿದ್ದ ಅಗಾಧ ವ್ಯಾಪಾರೀ ಗುಣ, ಹಾಗೂ ಬುದ್ಧಿವಂತಿಕೆಯಿಂದ ಅವರು ಮಾಡಿದ ಹೂಡಿಕೆ ಇವತ್ತು ಅವರನ್ನು ವಿಶ್ವದ ಮೂರನೇ ಶ್ರೀಮಂತ ಹಾಗೂ ವಿಶ್ವದ 15ನೇ ಪ್ರಭಾವೀ ವ್ಯಕ್ತಿಯನ್ನಾಗಿಸಿದೆ. ವಾರೆನ್ ಬಫೆಟ್ ರವರ ಈ ಯಶಸ್ಸಿಗೆ ಅವರ ದಾನಧರ್ಮಗಳಿಗೆ ಜೈಹೋ..!
  •   ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

POPULAR  STORIES :

ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story

“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

ಸೇಲ್ಸ್ ಮ್ಯಾನ್ ಆಗಿದ್ದವರ ಆಸ್ತಿ ರೂ.121819104000.!

16-21 ವಯಸ್ಸಿನವರಲ್ಲಿ ಮಿತಿಮೀರಿದೆ `ಕಾಮನೆ..!’ ಹದಿವಯಸ್ಸಿನ ಹುಡುಗ-ಹುಡುಗಿಯರು ಹಾಳಾಗುತ್ತಿದ್ದಾರೆ..!?

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...