ಇವತ್ತು ಫೇಸ್ ಬುಕ್, ವಾಟ್ಸಪ್ , ಇನ್ ಸ್ಟಾಗ್ರಾಂ ಮೊದಲಾದ ಸೋಶಿಯಲ್ ಮೀಡಿಯಾಗಳದ್ದೇ ಹವಾ..! ಅದರಲ್ಲೂ ಜನ ಊಟ-ತಿಂಡಿ ಬಿಟ್ಟಾದರೂ ಇರಬಲ್ಲರು, ವಾಟ್ಸಪ್ ಬಿಟ್ಟು ಇರಲಾರರು ಎಂಬ ಮಟ್ಟಿಗೆ ವಾಟ್ಸಪ್ ಪ್ರಾಮುಖ್ಯತೆ ಬೀರಿದೆ.
ವಾಟ್ಸಪ್ ನಲ್ಲಿ ಗ್ರೂಪ್ ಕ್ರಿಯೇಟ್ ಮಾಡ್ಕೊಂಡು ಸಂದೇಶ-ಮಾಹಿತಿ ವಿನಿನಯ ಮಾಡಿಕೊಳ್ಳುವುದು ಗೊತ್ತೇ ಇದೆ. ಈಗ ಈ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ಸಿಕ್ಕಿದೆ..!
ಐಒಎಸ್, ಆ್ಯಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್ ಗಳಲ್ಲಿ ವಾಟ್ಸಪ್ ಬಳಕೆದಾರರು ಈ ಅನುಕೂಲ ಪಡೆಯಬಹುದಾಗಿದೆ.
ಗ್ರೂಪ್ ಅಡ್ಮಿನ್ ಗಳು ತಮ್ಮ ಸದಸ್ಯರು ಕಳಿಸುವ ಸಂದೇಶ, ಫೋಟೋ, ವೀಡಿಯೋ ಮತ್ತು ಜಿಫ್ ಗಳನ್ನು ತಡೆ ಹಿಡಿಯುವ ಅಧಿಕಾರ ಪಡೆಯಲಿದ್ದು, ಗ್ರೂಪ್ ಗೆ ಬರುವ ಎಲ್ಲಾ ಸಂದೇಶಗಳನ್ನು ಮೊದಲು ಅಡ್ಮಿನ್ ಪರಿಶೀಲಿಸಿ ಇತರ ಸದಸ್ಯರಿಗೆ ಕಳಿಸುವ ಅಧಿಕಾರ ಪಡೆಯುವರು.