ವಾಟ್ಸಪ್ ನಲ್ಲಿ ಇನ್ಮುಂದೆ ಜಾಹಿರಾತು ಪ್ರಕಟಚಾಗಲಿದೆ ಎಂದು ಹೇಳಲಾಗುತ್ತಿದೆ.
ಯಾವುದೇ ಕಾರಣಕ್ಕೂ ಜಾಹಿರಾತು ಪ್ರಕಟಿಸಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ಜಾಹಿರಾತು ಪ್ರಕಟಣೆಗೆ ಮುಂದಾಗಿದೆ.
ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ ಶೇ.50 ರಷ್ಟು ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದಾರೆ.
ಈ ಸ್ಟೇಟಸ್ ಅಪ್‍ಡೇಟ್ ಮಾಡುವ ಜಾಗದಲ್ಲೇ ಜಾಹೀರಾತನ್ನು ಪ್ರಕಟಿಸಲು ವಾಟ್ಸಪ್ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಇಷ್ಟುದಿನ ವಾಟ್ಸಪ್ ಗೆ ಮೊಬೈಲ್ ನಂಬರ್ ಸಾಕಾಗಿತ್ತು. ಇನ್ಮುಂದೆ ಕೆಲವು ವಿವರಗಳನ್ನು ದಾಖಲಿಸ ಬೇಕಾದೀತು.