ಲಷ್ಕರಿ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಉತ್ತರಪ್ರದೇಶದ ವಾಟ್ಸ್ ಅಪ್ ಬಳಕೆದಾರನೊಬ್ಬನಿಗೆ ಆಹ್ವಾನ ಬಂದಿದೆ…! ಈ ಬಗ್ಗೆ ಲಖನೌ ಸೈಬರ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಟ್ಸಪ್ ಗ್ರೂಪ್ ನ ಹೆಸರೇ ಲಷ್ಕರಿ ಇ ತೊಯ್ಬಾ ಎಂದಿದೆ. ಇದನ್ನು ರಾಜಸ್ತಾನದ ಭಿಲ್ವಾಡಾದಲ್ಲಿನ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆರಂಭಿಸಿದ್ದಾನೆ ಎನ್ನಲಾಗುತ್ತಿದೆ.
ತನ್ನ ಮೊಬೈಲ್ ಸಂಖ್ಯೆಗೆ ಇದರಿಂದ ಮೆಸೇಜ್ ಬರುತ್ತಿದ್ದಂತೆ ಗಾಬರಿಗೊಂಡ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.