ವಾಟ್ಸಪ್ ಗ್ರೂಪ್ ನಿಂದ ತೆಗೆದಿದ್ದಕ್ಕೆ ಚಾಕು ಇರಿದ…!

admin
1 Min Read

ವಾಟ್ಸಪ್ ಗ್ರೂಪ್ ನಿಂದ ರಿಮ್ಯೂ ಮಾಡಿದ್ರೆ ನೀವು ಏನ್ ಮಾಡ್ತೀ? ತೆಗೆದ್ರೆ ತೆಗೆಯಲಿ ಅಂತ ಸುಮ್ಮನೆ ಆಗ್ತೀರಿ. ಇಲ್ಲ , ಯಾಕೆ ತೆಗೆದಿದ್ದು , ಆ್ಯಡ್ ಮಾಡು ಅಂತ ಅಡ್ಮಿನ್ ಹತ್ತಿರ ಕೇಳ್ತೀರಿ. ಆದರೆ, ಇಲ್ಲೊಬ್ಬ ಭೂಪ ಅಡ್ಮಿನ್ ಗೆ ಚಾಕು ಇರಿದಿದ್ದಾನೆ…!
ಈ ಘಟನೆ ನಡೆದಿರೋದು ಮಹಾರಾಷ್ಟ್ರದಲ್ಲಿ. ಮೇ 17 ರ ರಾತ್ರಿ ಅಹಮದ್ ನಗರ ಮನ್ಮಾಡ್ ರಸ್ತೆಯ ಬಳಿ ಈ ಘಟನೆ ನಡೆದಿದೆ.


ಚೈತನ್ಯ ಶಿವಾಜಿ ಭೋರ್ (18) ಚಾಕು ಇರಿತಕ್ಕೆ ಒಳಗಾದವರು. ಮೂವರು ವ್ಯಕ್ತಿಗಳ ತಂಡ ಚಾಕುವಿನಿಂದ ಚೈತನ್ಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೈತನ್ಯ ಅಹಮದ್ ನಗರದ ಅಗ್ರಿಕಲ್ಚರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಈ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಗ್ರೂಪ್ ಕ್ರಿಯೇಟ್ ಮಾಡಿದ್ದರು. ಗ್ರೂಪ್ ಅಡ್ಮಿನ್ ಚೈತನ್ ಸಚಿನ್ ಗಧಕ್ ಎಂಬಾತನನ್ನು ತೆಗೆದು ಹಾಕಿದ್ದ. ಸಚಿನ್ ಕಾಲೇಜು ಬಿಟ್ಟಿದ್ದರಿಂದ ರಿಮ್ಯೂ ಮಾಡಲಾಗಿತ್ತು.


ಗ್ರೂಪ್ ನಿಂದ ತೆಗೆದಿದ್ದಕ್ಕೆ ಸಚಿನ್ ಸ್ನೇಹಿತರಾದ ಅಮೂಲ್ ಹಾಗೂ ಮತ್ತಿತರರಿಬ್ಬರ ಜೊತೆ ಬಂದು ಚೈತನ್ಯಗೆ ಚಾಕು ಇರಿದಿದ್ದಾನೆ.

Share This Article
Leave a Comment