`ಟೀ' ಮಾರುತ್ತಿರುವ ಪದವೀಧರ ಸೋದರರ ಕಥೆ..!

1
68

ಆ ಮೂವರು ಸೋದರರು ಪದವೀಧರರು. ಪದವಿ ಮುಗಿದರೂ ಕೆಲಸಕ್ಕೆ ಅಲೆದಾಟ ತಪ್ಪಲಿಲ್ಲ..! ಅಣ್ಣನಿಗೆ ಕಾಲ್ಸೆಂಟರ್ ನಲ್ಲಿ ಸಿಕ್ಕ ಕೆಲಸ ತೃಪ್ತಿ ಸಿಗಲಿಲ್ಲ..! ಮೂವರೂ ಕೆಲಸಕ್ಕಾಗಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ..! ಕೆಲಸಕ್ಕೆ ಅಲೆದು ಅಲೆದು ಸಾಕಪ್ಪಾ ಸಾಕು ಅನಿಸಿದಾಗ ಈ ಸೋದರರು ಸ್ವಂತ ಉದ್ಯೋಗವನ್ನು ಮಾಡಲು ನಿರ್ಧರಿಸಿದ್ರು..! ದೊಡ್ಡ ಮೊತ್ತರ ಬಂಡವಾಳ ಹಾಕೋಕೆ ದುಡ್ಡು ಇರಲಿಲ್ಲ..! ಸಾಲ ಮಾಡಿಯಾದ್ರೂ ಸ್ವಲ್ಪ ದೊಡ್ಡ ಮೊತ್ತದ ಬ್ಯುಸ್ನೆಸ್ ಮಾಡಿದ್ರೂ ಕ್ಲಿಕ್ ಆಗದೇ ಇದ್ರೆ ಏನಪ್ಪಾ ಮಾಡೋದು ಅಂತ `ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ರು’..! ಯಾರು ಏನಂದರೂ ಚಿಂತೆಯಿಲ್ಲ ಅಂತ, ಹೇಳೋರ ಬಗ್ಗೆ ತಲೆಕೆಡಿಸಿಕೊಳ್ಳದೇ `ಟೀ ಮಾರೋಕೆ ಶುರುಮಾಡಿದ್ರು..! ಪದವೀಧರರಾಗಿ ಟೀ ಮಾರಾಟ ಮಾಡಿ ಜೀವನ ನಡೆಸಲು ಮುಂದಾದ ಈ ಸಹೋದರರ ಕಿರು ಪರಿಚಯವಿಲ್ಲಿದೆ..!
ಈ ಸೋದರರು ಲಕ್ನೋದವರು..! ಹೆಚ್ಚು ಕಡಿಮೆ 20 ವರ್ಷದ ಆಸುಪಾಸಿನವರು. ಪದವಿ ತಕ್ಕಂತೆ ಕೆಲಸ ಸಿಗಲಿಲ್ಲ..! ಕೆಲಸ ಸಿಗಲಿಲ್ಲ ಅಂತ ಸುಮ್ಮನೇ ಕೂರಲಾಗುತ್ತದೆಯೇ..?! ಹ್ಞೂಂ, ಹ್ಞೂಂ ಸಾಧ್ಯವಿಲ್ಲ..! ಉದ್ಯೋಗ ಬೇಕೇ ಬೇಕು..! ಆಗ ಹಿರಿಯ ಸೋದರ `ಗೋವಿಂದ್ ತ್ರಿಪಾಟಿ’ಯವರಿಗೊಂದು ಐಡಿಯಾ ಬರುತ್ತೆ..! ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಪದವಿ ಪಡೆದಿರುವ ಇವರು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡ್ತಾ ಇದ್ರು. ಕೆಲಸ ಯಾಕೋ ಬೇಡ ಅನಿಸಿತು..! ತಾನೇ ಸ್ವಂತ ಉದ್ಯೋಗ ಮಾಡ್ಬೇಕೆಂದು ನಿರ್ಧರಿಸಿದ ಗೋವಿಂದ್ ತ್ರಿಪಾಟಿಗೆ ಹೊಳೆದಿದ್ದೇ `ಟೀ ಮಾರುವ’ ಐಡಿಯಾ..!
ಆಗ ಅವರ ಇಬ್ಬರು ಸೋದರರಾದ ಗೋಪಾಲ್ ಮತ್ತು ಮಾದವ್ ಕೂಡ ಕೆಲಸಕ್ಕೆ ಅಲೆಯುತ್ತಿದ್ದರು..! ಕೆಲಸಕ್ಕೆ ಅಲೆದು ಅಲೆದು ಬೇಜಾರಾಗಿದ್ದ ಅವರೂ ಅಣ್ಣನ ಜೊತೆ ಕೈ ಜೋಡಿಸಿದರು..!
ಇವತ್ತು ಈ ಮೂವರು ಸೋದರರು ತಮ್ಮದೇ ಟೀ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ..! ಎಲ್ಲಾ ಖರ್ಚುಗಳು ಹೋಗಿ 350-400 ರೂಪಾಯಿ ಉಳಿಸುತ್ತಿದ್ದಾರೆ..! ಕಾಲ್ ಸೆಂಟರ್ ಕೆಲಸಕ್ಕಿಂತ ಇದೇ ಕೆಲಸ ತೃಪ್ತಿ ತಂದಿದೆ ಅಂತಾರೆ ಹಿರಿಯ ಸೋದರ ಗೋವಿಂದ್ ತ್ರಿಪಾಟಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

1 COMMENT

LEAVE A REPLY

Please enter your comment!
Please enter your name here