ಗ್ರಾಹಕರ ದೂರು ಮತ್ತು ಕುಂದುಕೊರತೆಗಳನ್ನು ಆಲಿಸಲು ವಾಟ್ಸ್ ಆ್ಯಪ್ ವಿಶೇಷ ಅಧಿಕಾರಿಯನ್ನು ನೇಮಿಸಿದೆ.
ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ಸಾಮಾಜಿಕ ಸಾಮಾರಸ್ಯ ಹಾಳುಮಾಡುವ ಸಂದೇಶಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಒಡೆತನದ ವಾಟ್ಸ್ ಆ್ಯಪ್ ವಿಶೇಷ ಅಧಿಕಾರಿಯನ್ನು ನೇಮಿಸಿದೆ.
ವಾಟ್ಸ್ ಆ್ಯಪ್ ಗೆ ಸಂಬಂಧಿಸಿದ ದೂರು, ಸಲಹೆ-ಸೂಚನೆ ಹಾಗೂ ಕಾನೂನು ಸಂಬಂಧಿಸಿದ ಸಲಹೆ-ಸೂಚನೆ ಹಾಗೂ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಅಧಿಕಾರಿಯೊಂದಿಗೆ ಹಂಚಿಕೊಳ್ಳಬಹುದು .