ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಕಳೆದ ಮೂರು ತಿಂಗಳಿನಿಂದ ಹೊಡಿಬಿಡ ಆಟದ ಹಬ್ಬಕ್ಕೆ ಅಬ್ಬರಕ್ಕೆ ಮನಸೋತಿದ್ದಾರೆ.. ಇಂಡಿಯಾ ವರ್ಲ್ಡ್ ಕಪ್ ಗೆಲ್ಲಲಿ ಸೋಲಲಿ ಆದ್ರೆ, ಟೀಮ್ ಇಂಡಿಯಾ ಆಟಕ್ಕೆ ಶಭಾಷ್ ಗಿರಿಯನ್ನ ನೀಡಿದ್ಧಾರೆ.. ಈಗ ಐಪಿಯಲ್ ಕಿಕ್ ಕೂಡ ಜೋರಾಗೆ ಇದೆ.. ಒಂದು ಕಡೆ ಹೊಸ ಹೊಸ ತಂಡಗಳ ಉದಯವಾಗಿದೆ.. ಮತ್ತೊಂದು ಕಡೆ ಗೆಲ್ಲೋ ಟೀಮ್ ಯಾವುದಿರಬಹುದು ಅನ್ನೋ ಲೆಕ್ಕಚಾರವನ್ನ ಕ್ರಿಕೆಟ್ ಪಂಡಿತರಿಂದ ಹಿಡಿದು ಅಭಿಮಾನಿಗಳವರೆಗೆ ಚರ್ಚೆಯಾಗ್ತಿದೆ.. ಹಾಗಾದ್ರೆ ಈ ಬಾರಿ ಗೆಲ್ಲೋ ಟೀಮ್ ಯಾವುದು ಎಂಬ ಬಗ್ಗೆ ಖಾಸಗಿ ಸಂಸ್ಥೆಯೊಂದು ಬುಕ್ಕಿಗಳ ಬಳಿ ಸಮೀಕ್ಷೆಯನ್ನ ನಡೆಸಿದೆ.. ಇನ್ನೂ ಈ ಬುಕ್ಕಿಗಳ ಪ್ರಕಾರ ಯಾವ ಟೀಮ್ ಗೆಲ್ಲಲಿದೆ ಅನ್ನೋದರ ವರದಿ ಇಲ್ಲಿದೆ ನೋಡಿ…
8.ಕಿಂಗ್ಸ್ ಇಲೆವನ್ ಪಂಜಾಬ್
ಪ್ರೀತಿ ಜಿಂಟಾ ನಸೀಬೆ ಸರಿ ಇಲ್ವೋ ಅಥವಾ ಪಂಜಾಬ್ ಆಟಗಾರ ಗ್ರಹಚಾರ ಸರಿ ಇಲ್ವೋ ಗೊತ್ತಿಲ್ಲ.. ಟೀಮ್ ನಲ್ಲಿರೋದು ಹೊಡಿಬಡಿ ಆಟಗಳ ಸ್ಪೆಷಲಿಸ್ಟ್ ಗಳಾದ ಮ್ಯಾಕ್ಸ್ ವೆಲ್, ಶಾನ್ ಮಾರ್ಷ್, ಡೆವಿಡ್ ಮಿಲ್ಲರ್, ಮುರುಳಿ ವಿಜಯ್.. ಆದ್ರೆ ಒಂದೊಮ್ಮೆ ಬ್ಯಾಟಿಂಗ್ ಆಡಿದ್ರೆ ಬೌಲಿಂಗ್ ನಲ್ಲಿ ಫೇಲ್, ಅಥವಾ ಬೌಲಿಂಗ್ ಮಾಡಿದ್ರೆ ಬ್ಯಾಟಿಂಗ್ ನಲ್ಲಿ ಫೇಲ್… ಇನ್ನೊಮ್ಮೆ ಈ ಎರಡರಲ್ಲೂ ಫೇಸ್.. ಈ ಹಿಂದೆ ನಡೆದ ಕೆಕೆಆರ್ ನ ವಿರುದ್ಧದ ಮ್ಯಾಚ್ ನಲ್ಲಿ ಆಗಿದ್ದು ಇದೆ… ಸದ್ಯ 4 ಮ್ಯಾಚ್ಗಳನ್ನ ಆಡಿರೋ ಪಂಜಾಬ್ ಕೇವಲ ಒಂದರಲ್ಲಿ ಗೆದಿದ್ದು ಮ್ಯಾಚ್ ಟೇಬಲ್ನಲ್ಲಿ ಕೊನೆ ಸ್ಥಾನದಲ್ಲಿ.. ಸದ್ಯಕ್ಕೆ ಬುಕ್ಕಿಗಳ ಪ್ರಕಾರ ಈ ಟೀಮ್ 4% ಗೆಲ್ಲೋ ಚಾನ್ಸ್ ಇದೆಯಂತೆ..
7.ಸನ್ ರೈಸರ್ಸ್ ಹೈದ್ರಬಾದ್.
ಪಂಜಾಬ್ ಹಾಗೆ ಸನ್ರೈಸರ್ ತಂಡಗಳು ಬುಕ್ಕಿಗಳ ಲೀಸ್ಟ್ನಲ್ಲಿರೋ ಕೊನೆ ತಂಡಗಳಂತೆ.. ಈ ಹಿಂದೆ ಡೆಕ್ಕನ್ ಚಾರ್ಚಸ್ ಹೆಸರಿನಲ್ಲಿ 2009ರಲ್ಲಿ ಐಪಿಎಲ್ ಕಪ್ನ ಎತ್ತಿತ್ತು.. ಆದಾದ ಮೇಲೆ ಈ ತಂಡದ ಗ್ರಹಚಾರ ಸರಿಯಿಲ್ಲ.. ಸದ್ಯಕ್ಕೆ ಗಬ್ಬರ್ಸಿಂಗ್ ಅಂತಾನೇ ಖ್ಯಾತಿಯಾಗಿರೋ ಶಿಖರ್ ಧವನ್ ಇದ್ರು ಗೆಲುವಿನ ಶಿಖರ ಮಾತ್ರ ಹತ್ತೋಕೆ ಆಗ್ತಿಲ್ಲ.. ಡೇವಿಡ್ ವಾರ್ನರ್, ಮಾರ್ಗನ್ನಂಥಹ ಬ್ಯಾಟ್ಸಮನ್, ಆಶಿಶ್ ನೆಹ್ರಾನಂತಹ ಬೌಲರ್ ಇದ್ರು ಮೂರಲ್ಲಿ ಒಂದು ಮ್ಯಾಚ್ ಗೆದ್ದಿರೋ ಸನ್ ರೈಸರ್ಸ್ ಗೆ ಬುಕ್ಕಿಗಳು ನೀಡಿರೋದು ಕೇವಲ 5%….
6.ಡೆಲ್ಲಿ ಡೇರ್ ಡೆವಿಲ್ಸ್
ಇನ್ನೂ ಬಿಎಮ್ಆರ್ ಒಡೆತನ ಡೆಲ್ಲಿ ಡೇರ್ ಡೆವಿಲ್ಸ್ ಹಣೆ ಬರಹ ಮೇಲಿನ ತಂಡಗಳಿಗಿಂತ ಹೊರತಾಗಿಲ್ಲ.. ಪ್ರತಿಯೊಂದು ಟೀಮ್ನ ಹಾಗೆ ಈ ಟೀಮ್ ಕಟ್ಟೋಕೆ ಈ ಟೀಮ್ನ ಫ್ರ್ಯಾಂಚೈಸ್ ಕೂಡ ಬೇಜಾನ ಹಣ ಸುರಿದಿದ್ದಾರೆ.. ಸದ್ಯಕ್ಕೆ ಜéಹೀರ್ ಖಾನ್ ನೇತೃತ್ವದಲ್ಲಿ ಈ ಟೀಮ್ ಫಿಲ್ಡ್ ಗೆ ಇಳಿದ್ರು ಟೀಮ್ ಪಾರ್ಫಮೆನ್ಸ್ ವಿಷ್ಯದಲ್ಲಿ ಹೇಳಿಕೊಳ್ಳೊವಂತಹ ಆಟ ಕಂಡು ಬಂದಿಲ್ಲ.. ಈ ನಡುವೆ ಬೆಂಗಳೂರಿನಲ್ಲೆ ನಡೆದ ಆರ್ಸಿಬಿ ಎದುರಿನ ಪಂದ್ಯದಲ್ಲಿ 192 ರನ್ ಗಳನ್ನ ಚೇಸ್ ಮಾಡಿ ಮೂರು ವಿಕೆಟ್ ಕಳೆದುಕೊಂಡೆ 7 ವಿಕೆಟ್ ಗಳ ಅಂತದಲ್ಲಿ ಗೆದ್ದುಬಿಡ್ತು… ಸದ್ಯಕ್ಕೆ ಪಾಯಿಂಟ್ ಟೇಬಲ್ನಲ್ಲಿ 3 ಪಂದ್ಯಗಳಲ್ಲಿ ಎರಡನ್ನ ಗೆದ್ದಿರೋ ಡೆಲ್ಲಿ ಈಗ 3 ಸ್ಥಾನದಲ್ಲಿ.. ಆದ್ರೂ ಬುಕ್ಕಿಗಳ ಲೀಸ್ಟ್ನಲ್ಲಿ ಕಳೆಗಿರೋ ಡೆಲ್ಲಿಗೆ ಇವ್ರು ನೀಡಿರೋ ಅಂಕ 6%
5.ಕೆಕೆಆರ್
ಸದ್ಯಕ್ಕೆ ಐಪಿಎಲ್ ಟೀಮ್ ಗಳ ಪೈಕಿ ಮೊದಲ ಸ್ಥಾನದಲ್ಲಿರೋದು ಇದೆ ಕೆಕೆಆರ್ ತಂಡ.. ಕನ್ನಡಿಗ ರಾಬಿನ್ ಉತ್ತಮ ಹಾಗೆ ಗೌತಮ್ ಗಂಭೀರ್ ಓಪನಿಂಗ್ ಬ್ಯಾಟಿಂಗ್ ಟೀಮ್ ಗೆಲ್ಲೋಕೆ ಕಾರಣವಾಗ್ತಿದೆ.. ಈ ಹಿಂದೆ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ದ ಆರಾಮಗೆ ಗೆದ್ದಿದ್ದಾರೆ.. ಟೀಮ್ ನಲ್ಲೂ ಕೂಡ ಸ್ಟಾರ್ ಬ್ಯಾಟ್ಸಮನ್ ಹಾಗೆ ಬೌಲರ್ ಗಳಿದ್ದು ಆಲ್ರೌಂಡರ್ ಗಳಿಗೇನು ಕಡಿಮೆಯಿಲ್ಲ.. ಆದ್ರೂ ಬುಕ್ಕಿಗಳ ಹಾರ್ಟ್ ಗೆಲ್ಲೋದ್ರಲ್ಲಿ ಈ ಟೀಮ್ ವಿಫಲವಾಗಿದ್ದು ಈ ಬಾರಿ ಇವ್ರು ಕಪ್ ಗೆಲ್ಲೋ ಬಗ್ಗೆ ರೆಟಿಂಗ್ ನಲ್ಲಿ 12% ನೀಡಿದ್ದಾರೆ.. ಆದ್ರೆ ಸದ್ಯಕ್ಕೆ ಕೆಕೆಆರ್ ಐಪಿಎಲ್ ಫೈನಲ್ಗೆ ಲಗ್ಗೆ ಇಡಲಿರೋ ಟೀಮ್ಗಳಲ್ಲಿ ಒಂದಾಗಿದೆ ಅನ್ನೋದನ್ನ ಮರೆಯುವಂತಿಲ್ಲ..
4.ಮುಂಬೈ ಇಂಡಿಯನ್ಸ್
ಕಳೆದ ಬಾರಿಯ ಐಪಿಎಲ್ ಚಾಂಪಿಯನ್ಸ್.. ರೋಹಿತ್ ಶರ್ಮಾ ನೇತೃತ್ವದಲ್ಲಿ ಕಣಕಿಳಿಯೋ ಈ ತಂಡದಲ್ಲಿ ಕೂಡ ಟಿ-20 ಸ್ಪೆಷಲಿಸ್ಟ್ಗಳ ದಂಡೆ ಇದೆ.. ಆದ್ರೆ, ಲಕ್ ಮಾತ್ರ ಇವ್ರ ಪರವಾಗಿ ಇಲ್ಲ ಅಂತಾನೆ ಹೇಳಬಹುದು.. ಸದ್ಯಕ್ಕೆ ರೋಹಿತ್ ಶರ್ಮಾ ಓಪನಿಂಗ್ನಲ್ಲಿ ಬ್ಯಾಟಿಂಗ್ ಬರ್ಬೇಕಾ..? ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ಬೇಕ ಅನ್ನೋ ಗೊಂದಲದಲ್ಲಿದ್ದಾರೆ.. ಭಜ್ಜಿ ಬ್ಯಾಟ್ ಬೇಜಾನ್ ಸೌಂಡ್ ಮಾಡ್ತಿದ್ದು, ಬೌಲಿಂಗ್ ನಲ್ಲಿ ಈತನ ಹವಾ ನಡಿತಿಲ್ಲ.. ಪೋಲಾರ್ಡ್, ಆಂಡರ್ಸನ್, ಬಟ್ಲರ್, ಸೌತಿ, ಪಾಂಡ್ಯ ಟೀಮ್ನಲ್ಲಿದ್ರು ಆಗೊಂದು ಈಗೊಂದು ಗೆಲುವು ಮುಂಬೈ ಟೀಮ್ಗೆ ಸಿಕ್ತದೆ.. ಸದ್ಯಕ್ಕೆ ಪಾಯಿಂಟ್ ನ ಟೇಬಲ್ ನಲ್ಲಿ 4 ಸ್ಥಾನದಲ್ಲಿರೋ ಈ ತಂಡ, ಆಡಿರೋ 5ರಲ್ಲಿ 3ನ್ನ ಸೋತು 2ರಲ್ಲಿ ಗೆಲುವನ್ನ ಪಡೆದಿದೆ.. ಹೀಗಾಗೆ ಬುಕ್ಕಿಗಳು ಈ ತಂಡಕ್ಕೆ 14% ರೇಟಿಂಗ್ ನೀಡಿದ್ದಾರೆ..
3.ರೈಸಿಂಗ್ ಪುಣೆ
ಇದ್ರಲ್ಲಿ ಧೋನಿ ಟೀಮ್ ಕಡೆಗಣಿಸೋ ಹಾಗೆ ಇಲ್ಲ.. ತನ್ನ ಮಾಸ್ಟರ್ ಪ್ಲಾನ್ ಗಳ ಮೂಲಕ ಎದುರಾಳಿ ತಂಡವನ್ನ ಸೋಲಿಸೊ ಜಾಣ್ಮೆ ಧೋನಿಗಿದೆ.. ಇದುವರೆಗೂ ಚೆನ್ನೈ ಪರ ಆಡ್ತಿದ್ದ ಈ ನಾಯಕ ಈಗ ಪುಣೆ ಪಾಲಾಗಿದ್ದಾರೆ.. ಅಷ್ಟೇ ಅಲ್ಲಿ ಬುಕ್ಕಿನ ಹಾಟ್ ಫೇವರೆಟ್ ತಂಡಗಳಲ್ಲಿ ಇದು ಕುಡ ಒಂದು.. ಕೆವಿನ್ ಪೀಟರ್ ಸನ್, ತಿಸಾರ ಪೆರೆರಾ, ಡುಪ್ಲೆಸ್ಸಿಸ್, ಅಜಿಂಕ್ಯಾ ರಹಾನೆ, ಸ್ಪಿನ್ ಸ್ಪೆಷಲಿಸ್ಟ್ ಆಶ್ವಿನ್ ಜೊತೆಗೆ ಇಶಾಂತ್ ಶರ್ಮಾ ಹಾಗೆ ಆರ್ಪಿ ಸಿಂಗ್, ಇಫ್ರಾನ್ಪಠಾಣ್ ಫಾಸ್ಟ್ ಬೌಲಿಂಗ್ ಇದೆ.. ಅದ್ರೂ ಧೋನಿ ಮ್ಯಾಜಿಕ್ ಯಾಕೋ ಟೀಮ್ನಲ್ಲಿ ವರ್ಕ್ ಔಟ್ ಆಗ್ತಿಲ್ಲ.. ಆಡಿರೋ 3 ಪಂದ್ಯಗಳಲ್ಲಿ 1 ಗೆದ್ದು 2 ಸೋತಿದೆ.. ಹಂಗಾಂತ ಈ ಟೀಮ್ ನ ಕಡೆಗಣಿಸುವಂತಿಲ್ಲ.. ಸದ್ಯಕ್ಕೆ ಕಪ್ ಗೆಲ್ಲೋ ರೆಟೀಂಗ್ನಲ್ಲಿ ಈ ಟೀಮ್ಗೆ 16% ನೀಡಿದ್ದಾರೆ..
2.ಗುಜರಾತ್ ಲಯನ್ಸ್
ಇದೇ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕೆ ಧುಮುಕಿರೋ ಟೀಮ್ ಗುಜರಾತ್ ಲಯನ್ಸ್.. ಹೆಸರಿಗೆ ತಕ್ಕ ಆಟ ಆಡಿ ತನ್ನ ಹವಾ ಕ್ರಿಯೇಟ್ ಮಾಡ್ತಿದೆ.. ಪಕ್ಕ ಟಿ-20ಗೆ ಆರ್ಡರ್ ಕೊಟ್ಟು ಮಾಡಿಸಿದಂತೆ ಇರೋ ಬ್ಯಾಟ್ಸಮನ್ ಹಾಗೆ ಬೌಲರ್ ಗಳು ಈ ಟೀಮ್ ನಲ್ಲಿದ್ದಾರೆ. ಪಂಜಾಬ್,ಪುಣೆ, ಹಾಗೆ ಮುಂಬೈನ ಸೋಲಿರೋ ಲಯನ್ಸ್ ಸದ್ಯಕ್ಕೆ ಕಪ್ ಗೆಲ್ಲೋ ಟೀಮ್ಗಳಲ್ಲಿರೋ ಮತ್ತೊಂದು ಹಾಟ್ ಫೇವರಟ್ ತಂಡ.. ಸುರೇಶ್ ರೈನಾ, ಆರೊನ್ ಫಿಂಚ್, ರವೀಂದ್ರ ಜಡೇಜಾ, ಬ್ರಾವೊ, ಮೆಕಲಮ್, ದಿನೇಶ್ ಕಾರ್ತಿಕ್ ಟೀಮ್ನಲ್ಲಿದ್ದಾರೆ.. ಪಕ್ಕ ಬ್ಯಾನೆಲ್ಸಡ್ ಟೀಮ್ ಇದು. ಇನ್ನೂ ಫಿಲ್ಡಿಂಗ್ ವಿಚಾರಕ್ಕೆ ಬಂದ್ರೆ ಎಲ್ಲ ಟೀಮ್ಗಳಿಗಿಂತ ಒಂದು ಹೆಜ್ಜೆ ಮುಂದಿದೆ.. ಬುಕ್ಕಿಗಳ ಜಾಮೂನ್ ಆಗಿರೋ ಈ ಟೀಮ್ ಈ ಬಾರಿ ಕಪ್ ಗೆಲ್ಲೋ ಎರಡನೇ ತಂಡವಾಗಿದೆ.. ಸದ್ಯಕ್ಕೆ ಲಯನ್ಸ್ನ ಆಟಕ್ಕೆ ಮನಸೋತಿರೋ ಇವ್ರು ಇದಕ್ಕೆ ನೀಡಿರೊ ರೇಟಿಂಗ್ 19%..
1.ಆರ್.ಸಿ.ಬಿ
ಆರ್.ಸಿ.ಬಿ ತಂಡ ಈಗ ಹಿಂದಿನಂತಿಲ್ಲ ಅನ್ನೋದು ನಿಮಗೆ ಗೊತ್ತೆಯಿದೆ.. ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಮೊದಲ ನಾಲ್ಕು ಜನ ಬ್ಯಾಟ್ಸ್ ಮನ್ ಗಳು ಘಾಟಾನುಗಟಿಗಳಾಗಿದ್ದಾರೆ.. ಯಾಕಂದ್ರೆ ಈ ಬಾರಿ ನಮ್ಮ ತಂಡದ ಪರವಾಗಿ ಬ್ಯಾಟಿಂಗ್ ಹಾಗೆ ಬೌಲಿಂಗ್ನಲ್ಲಿ ಮಿಂಚೋಕೆ ಅಂತಾನೆ ವ್ಯಾಟ್ಸನ್ ಆಗಮಿಸಿದ್ಧಾರೆ.. ಜೊತೆಗೆ ಒಳ್ಳೆ ಪರ್ಫಾರ್ ಮೆನ್ಸ್ ಸಹ ನೀಡಿದ್ದಾರೆ.. ಎದುರಾಳಿ ತಂಡಕ್ಕೆ ಕ್ರಿಸ್ ಗೇಲ್, ರನ್ ಮಿಷನ್ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ವಾಟ್ಸನ್ ರಂತಹ ಬ್ಯಾಟ್ಸಮನ್ ಗಳನ್ನ ಔಟ್ ಮಾಡಿ ಮುಂದೆ ಸಾಗೋಕೆ ತಿಣುಕಾಡ್ತವೆ.. ಕಳೆದ ಮೂರು ಮ್ಯಾಚ್ ನಲ್ಲಿ ಸನ್ ರೈಸರ್ಸ್ ವಿರುದ್ದ ಗೆದ್ದು, ದಿಲ್ಲಿ ವಿರುದ್ದ ಹಾಗೆ ಮುಂಬೈ ವಿರುದ್ದ ಸೋತಿದ್ರು ಆರ್ಸಿಬಿಯ ಹವಾವಂತು ತಣ್ಣಗಾಗಿಲ್ಲ.. ಬೌಲಿಂಗ್ ವಿಭಾಗದಲ್ಲಿ ಕಳೆಪೆ ಪ್ರದರ್ಶನವಿದ್ರು, ಬ್ಯಾಟಿಂಗ್ ನಲ್ಲಿ ಟಿ-20ಗೆ ಹೇಳಿ ಮಾಡಿಸಿದ ಲೈನ್ಅಪ್ ನಮ್ಮ ಬೆಂಗಳೂರು ತಂಡಕ್ಕಿದೆ.. ಸದ್ಯಕ್ಕೆ ಬೆಂಗಳೂರು ತಂಡಕ್ಕೆ ಸಮೀಕ್ಷೆಯ ಪ್ರಕಾರ 27%ರಷ್ಟು ಆರ್ಸಿಬಿಯೇ ಈ ಬಾರಿ ಐಪಿಎಲ್ ಕಪ್ ಎತ್ತಲಿದ್ದಾರೆ ಅಂತಾ ಹೇಳಿದ್ದಾರೆ ಬುಕ್ಕಿಗಳು.. ಸದ್ಯಕ್ಕೆ ನಮ್ಮ ತಂಡವೇ ಈ ಲೀಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿ.. ನಮಗೂ ಬೇಕಿರೋದು ಈ ಬಾರಿ ಫೈನಲ್ ನಲ್ಲಿ ಆರ್.ಸಿ.ಬಿ ಚಾಂಪಿಯನ್ಸ್ ಆಗ್ಬೇಕು ಅನ್ನೋದೆ ತಾನೆ..
ಸದ್ಯಕ್ಕೆ ಇದಿಷ್ಟು ಈಗೀನ ಲೀಸ್ಟ್ ಅಷ್ಟೆ.. ಈ ಚುಟುಕು ಕ್ರಿಕೆಟ್ ನಲ್ಲಿ ಕೊನೆ ಸ್ಥಾನದಲ್ಲಿರೋ ತಂಡ ಮೊದಲ ಸ್ಥಾನಕ್ಕೆ ಬರಬಹದು.. ಮೊದಲ ಸ್ಥಾನವನ್ನ ಅಲಂಕರಿಸಿರೋ ಹೆಚ್ಚು ನಿರೀಕ್ಷೆಯನ್ನ ಹುಟ್ಟುಹಾಕಿರೋ ಟೀಮ್ ಗಳು ಸೆಮಿಗೂ ಬರದೆ ಮನೆಗೆ ನಡೆಯ ಬಹುದು.. ಅದಕ್ಕೆ ಹೇಳೋದು ಇದನ್ನ ಟಿ-20 ಅಂತ..
ಎನಿ ವೇ ನಮ್ಮ ಟೀಮ್ ಈ ಬಾರಿಯಾದ್ರು ಗೆಲ್ಲಲಿ.. ರೇಟಿಂಗ್ ಏನೇ ಇರ್ಲಿ, ಟೀಮ್ ನ ಟ್ರ್ಯಾಕ್ ರೆಕಾರ್ಡ್ ಏನೇ ಇರ್ಲಿ, ಫೀಲ್ಡ್ ಗೆ ಇಳಿದ ಮೇಲೆ ಕೊನೆ ಬಾಲ್ ವರೆಗು ಗೆಲ್ಲೋ ಟೀಮ್ ಗಳನ್ನ ಡಿಸೈಡ್ ಮಾಡೋದು ಕಷ್ಟ.. ನೋಡೋಣಾ ಐಪಿಎಲ್ ನ ಈ ಕಪ್ ಹೊತ್ತು ಫೈನಲ್ ನಲ್ಲಿ ಗೆದ್ದು ಬೀಗೊ ಟೀಮ್ ಯಾವುದು ಅಂತಾ..
- ಅಶೋಕ್
POPULAR STORIES :
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?