ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

Date:

 

ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ ನಿಷ್ಠೆಯಿಂದಿರಬೇಕು. ಹೆಂಡತಿ ಮಕ್ಕಳಿಗಾಗಿ ಗಂಡ ಕಷ್ಟಪಟ್ಟು ದುಡಿಯುತ್ತಾನೆ. ಸಾಲಸೋಲ ಮಾಡುತ್ತಾನೆ. ಎಷ್ಟೇ ಕಷ್ಟ ಇದ್ದರೂ ತನ್ನ ಕುಟುಂಬ ಚೆನ್ನಾಗಿರಲಿ ಅಂತ ಬಯಸುತ್ತಾನೆ. ಎಲ್ಲಾ ಗಂಡಂದಿರು ಹೀಗಿರುವುದಿಲ್ಲ. ಆದರಲ್ಲೂ ಕೆಲ ಹೆಣ್ಣುಮಕ್ಕಳಿಗೆ ಸ್ವಲ್ಪ ಓದಿಕೊಂಡ ಮಾತ್ರಕ್ಕೆ ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಹುಂಬತನವಿರುತ್ತದೆ. ಅಸಲಿಗೆ ಓದು ತಿಳುವಳಿಕೆಯನ್ನು ಹೆಚ್ಚಿಸಬೇಕು. ಬುದ್ದಿ ಇಲ್ಲದಂತೆ ವರ್ತಿಸುವುದಕ್ಕಲ್ಲ. ಮೊನ್ನೆ ಸರ್ಜಾಪುರದ ಕೈಕೊಂಡನಹಳ್ಳಿಯ ಅಪಾರ್ಟ್ ಮೆಂಟಿನಲ್ಲಿ ಪತಿ ಚಂದ್ರಪ್ರಕಾಶ್ ಸಿಂಗ್ ಕೈ ಬೆರಳಿಗೆ ಪತ್ನಿ ಸುನೀತಾ ಸಿಂಗ್ ಚಾಕುವಿನಿಂದ ತೀವ್ರವಾಗಿ ಗಾಯಗೊಳಿಸಿದ್ದಳು. ವೃತ್ತಿಯಿಂದ ಉಪನ್ಯಾಸಕಿಯಾಗಿದ್ದ ಸುನೀತಾ ಸಿಂಗ್ ಇತ್ತೀಚೆಗೆ ಕೆಲಸಬಿಟ್ಟು ಮನೆಯಲ್ಲಿದ್ದಳು. ಸಾಫ್ಟ್ ವೇರ್ ಇಂಜೀನಿಯರ್ ಆಗಿದ್ದ ಪತಿ ಚಂದ್ರಪ್ರಕಾಶ್ ಸಿಂಗ್ ಮೊನ್ನೆ ರಾತ್ರಿ ಮನೆಗೆ ಬಂದಾಗ ಪತ್ನಿ ಅಡುಗೆ ಮಾಡಿರಲಿಲ್ಲ. ಕೇಳಿದ್ದಕ್ಕೆ ಉಢಾಫೆಯಾಗಿ ಉತ್ತರಿಸಿ ಮೊಬೈಲ್ನಲ್ಲಿ ಮುಳುಗಿದ್ದಳು. ಸಿಟ್ಟಾದ ಪತಿ ಅವಳ ಮೊಬೈಲ್ ಕಿತ್ತು ಇನ್ ಬಾಕ್ಸ್ ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ಸಂದೇಶಗಳಿದ್ದವು. ಯಾವ ಪತಿ ತಾನೇ ಸುಮ್ಮನಿರುತ್ತಾನೆ. ಸಮಾ ರುಬ್ಬಿದ್ದಾನೆ. ಆದರೆ ಈ ಓದಿಕೊಂಡ ಹೆಂಡತಿ ಅಡುಗೆ ಮನೆಗೆ ಹೋಗಿ ಚಾಕು ತಂದು ಗಂಡನ ಕೈ ಬೆರಳನ್ನೇ ಡ್ಯಾಮೇಜ್ ಮಾಡಿದ್ದಾಳೆ. ಇಬ್ಬರೂ ಪರಸ್ಪರ ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿರಿಯರ ಸಮ್ಮುಖದಲ್ಲಿ ರಾಜೀಪಂಚಾಯ್ತಿಯೂ ನಡೆದಿದೆ. ಮದುವೆಯಾಗಿ ಎಳು ವರ್ಷವಾಗಿದೆ. ಗಂಡನಿಗೆ ನಿಷ್ಠೆಯಿಂದಿರುವುದನ್ನು ಬಿಟ್ಟು ಬೇರೊಬ್ಬರ ಜೊತೆ ಅಶ್ಲೀಲವಾಗಿ ಚಾಟ್ ಮಾಡುವ ಇಂತಹ ಹೆಣ್ಣುಮಕ್ಕಳಿಗೆ ಏನ್ ಹೇಳೋಣ ಹೇಳಿ. ಓದಿಕೊಂಡ ಮಾತ್ರಕ್ಕೆ ಏನ್ ಬೇಕಾದ್ರೂ ಮಾಡಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿರುವ ಇಂತಹ ಹೆಣ್ಣುಮಕ್ಕಳಿಂದ ಸಂಸಾರಗಳು ಎಕ್ಕುಟ್ಟಿಹೋಗುತ್ತಿವೆ. ಹಾಗಂತ ಗಂಡಂದಿರೆಲ್ಲಾ ಸಾಚರೆಂದೇನಲ್ಲ. ಕೆಲವರಿಗೆ ಮಾತ್ರ ಅನ್ವಯವಾಗುವ ಮಾತಿದು.

 

If you Like this Story , Like us on Facebook  The New India Times

POPULAR  STORIES :

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story

“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...