ಅವರು ಮೊದಲ ಹೆಂಡತಿ ದೂರವಾದ ಮೇಲೆ ಎರಡನೇ ಮದುವೆಯಾಗಿದ್ರು. ಮದುವೆಯಾಗಿ ಮೂರು ವರ್ಷದ ಬಳಿಕ ಇದೀಗ ಎರಡನೇ ಹೆಂಡತಿಯ ಮದುವೆ ಇತಿಹಾಸ ತಿಳಿದಿದೆ. ಎರಡನೇ ಹೆಂಡತಿಯೇ ನನಗೆಲ್ಲಾ ಅಂದುಕೊಂಡಿದ್ದ ಆ ಪತಿ ಇವತ್ತು ತನ್ನ ಎರಡನೇ ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಅವರ ಹೆಂಡತಿ ಅವರಿಗೆ ಅದೆಂಥಾ ದ್ರೋಹ ಮಾಡಿದ್ದಾರೆ ಗೊತ್ತಾ?
ಹೀಗೆ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವ್ಯಕ್ತಿಯ ಸಾಂಸಾರಿಕ ಜೀವನದ ಬಗ್ಗೆ ಕೇಳಿದ್ರೆ ಅಯ್ಯೋ ಅನಿಸುತ್ತೆ. ಇವರ ಎರಡನೇ ಪತ್ನಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದ್ರೆ… ಮದುವೆ ಪುರಾಣಗಳು ಬಿಚ್ಚಿಕೊಳ್ಳುತ್ತವೆ..!
ಹೀಗೆ ಹೆಂಡತಿ ವಿರುದ್ಧ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ ವ್ಯಕ್ತಿಯ ಹೆಸರು ಮಹಾಂತೇಶ್ ಬೆಲ್ಲದ. ಈ ಘಟನೆ ನಡೆದಿದ್ದು ಬೆಳಗಾವಿಯಲ್ಲಿ.
ಮಹಾಂತೇಶ್ ಅವರ ಮೊದಲ ಹೆಂಡತಿ ಇದ್ದಕ್ಕಿದ್ದಂತೆ ಕಾಣೆ ಆದ್ರಂತೆ. ಆಕೆ ಕಾಣೆಯಾದ ಬಳಿಕ ಮನೆಯವರೆಲ್ಲಾ ಇನ್ನೊಂದು ಮದುವೆ ಆಗು ಅಂತ ಹಠ ಹಿಡಿದ್ರಂತೆ. ಮನೆಯವರ ಒತ್ತಾಯದಿಂದ ಎರಡನೇ ಮದುವೆ ಆಗಲು ನಿರ್ಧರಿಸಿ, 2014 ಸೆಪ್ಟೆಂಬರ್‍ನಲ್ಲಿ ಗೀತಾ ಎಂಬುವವರನ್ನು ಎರಡನೇ ಮದುವೆ ಆದ ಇವರು ಮೂರು ವರ್ಷಗಳ ಕಾಲ ಆಕೆಯ ಜೊತೆ ಸಂಸಾರ ಮಾಡ್ತಾರೆ.
ಮಹಾಂತೇಶ್‍ಗೆ ನಾನು ಎರಡನೇ ಹೆಂಡ್ತಿ ಅಂತ ಗೀತಾಗೂ ಗೊತ್ತಿತ್ತು. ಗೀತಾ ಕೂಡ ಇದು ನನ್ನ ಎರಡನೇ ಮದುವೆ ಎಂದು ಹೇಳಿದ್ರಂತೆ. ಮೊದಲ ಮದುವೆ ವಿಚಾರ ಮಾತ್ರ ಹೇಳಿದ್ದ ಗೀತಾ ಎರಡನೇ ಮದುವೆ ವಿಚಾರ ಮುಚ್ಚಿಟ್ಟಿದ್ದರಂತೆ. ಮಹಾಂತೇಶ್ ನನ್ನಂತೆಯೇ ಗೀತಾಗೂ ಇದು ಎರಡನೇ ಮದುವೆ ಅಂತ ತಿಳಿದು ಹೊಸಜೀವನಕ್ಕೆ ಕಾಲಿಟ್ಟಿದ್ದರಂತೆ. ಆದರೆ, ಇದೀಗ ಗೀತಾಗೆ ತಾನು ಎರಡನೇ ಗಂಡ ಅಲ್ಲ.. ಮೂರನೇಯವ ಎಂದು ಗೊತ್ತಾಗಿ ಕೆಂಡಾಮಂಡಲರಾಗಿದ್ದಾರೆ. ಮೊದಲ ಮದುವೆ ವಿಷಯ ಹೇಳಿ, ಎರಡನೇ ಮದುವೆ ವಿಷಯವನ್ನು ಮುಚ್ಚಿಟ್ಟಿದ್ದ ಗೀತಾ ವಿರುದ್ಧ ದೂರು ನೀಡಿದ್ದಾರೆ.
ಮೊದಲು ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರನ್ನು ವಿವಾಹವಾಗಿ 2012ರಲ್ಲಿ ಅವರಿಗೆ ವಿಚ್ಛೇಧನ ನೀಡಿ, ಬಳಿಕ ದೆಹಲಿಯ ಉದ್ಯಮಿಯೊಬ್ಬರ ಜೊತೆ ವಿವಾಹವಾಗಿದ್ದರು. ಬಳಿಕ 2014ರಲ್ಲಿ ತನ್ನನ್ನು ಮದುವೆಯಾಗಿದ್ದರು ಎಂದು ಮಹಾಂತೇಶ್ ಹೇಳಿದ್ದಾರೆ. ಅಷ್ಟೇಅಲ್ಲ.. ಮಹಾಂತೇಶ್ ಅವರನ್ನು ಮದುವೆಯಾದ ಬಳಿಕವೇ 2015ರಲ್ಲಿ ಎರಡನೇ ಗಂಡನಿಂದ ವಿಚ್ಚೇಧನ ಪಡೆದಿದ್ದಾರೆ ಎಂಬ ಆರೋಪ ಗೀತಾ ವಿರುದ್ಧ ಕೇಳಿಬಂದಿದೆ.
ಮಹಾಂತೇಶ್ ಮತ್ತು ಗೀತಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಬಳಿಕ ಗೀತಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ ಮಹಾಂತೇಶ್‍ಗೆ ತಾನು 3ನೇ ಗಂಡ ಎಂಬ ಆಘಾತಕಾರಿ ಸಂಗತಿ ತಿಳಿದಿದೆ. ದಾಖಲೆಗಳನ್ನಿಟ್ಟುಕೊಂಡು ಗೀತಾ ವಿರುದ್ಧ ವಂಚನೆ ದೂರು ದಾಖಲಿಸಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.