ಅತ್ಯಂತ ಅಗ್ಗದ ಇಂಟರ್‍ನೆಟ್ ಒದಗಿಸೋದು ಯಾವುದು..? ರಿಲಯನ್ಸ್ ಜಿಯೋ ಅನ್ನೋದು ಸಾಮಾನ್ಯವಾಗಿ ಎಲ್ಲರಿಂದಲೂ ಬರುವ ಉತ್ತರ…! ಆದ್ರೆ ಬೆಂಗಳೂರಿನಲ್ಲಿ ಅಗ್ಗದ ಇಂಟರ್‍ನೆಟ್ ನೀಡ್ತಾ ಇರೋದು ವೈಫೈ ಡಬ್ಬಾ…!
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಂಸ್ಥೆ ಕಡಿಮೆ ದರದಲ್ಲಿ ಇಂಟರ್‍ನೆಟ್ ಸೌಲಭ್ಯ ನೀಡ್ತಿದೆ. ಶುಭೆಂದು ಶರ್ಮಾ ಹಾಗೂ ಕರಮ್ ಲಕ್ಷ್ಮಣ್ ಸ್ಥಾಪಿಸಿರೋ ವೈಫೈ ಡಬ್ಬಾ ಎಂಬ ಸಂಸ್ಥೆ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ…!
ಹೆಚ್ಚು ಕಡಿಮೆ 13 ತಿಂಗಳ ಹಿಂದೆ ಇದು ಕಾರ್ಯಾರಂಭ ಮಾಡಿದ್ದು, ತುಂಬಾ ಸದ್ದು ಮಾಡ್ತಿದೆ. ಬೇಕರಿ, ಟೀ ಸ್ಟಾಲ್‍ಗಳಲ್ಲೂ ಇದರ ಟೋಕನ್ ಸಿಗುತ್ತೆ. ಇದನ್ನು ಬಳಸಲು ಯಾವುದೇ ಅಪ್ಲಿಕೇಶನ್ ಡೌನ್‍ಲೋಡ್ ಮಾಡ್ಕೊಳ್ಳೋದು ಬೇಡ…! ಮೊಬೈಲ್ ನಂಬರ್ ಪಂಚ್ ಮಾಡಿ ಒಟಿಪಿ ವೇರಿಫಿಯೇಷನ್ ಪ್ರಕ್ರಿಯೆ ಪೂರ್ಣ ಮಾಡಿದ್ರೆ ಸಾಕು. 20 ರೂಗೆ 1 ಜಿಬಿ ಲಭ್ಯ..! 24 ಗಂಟೆ ವ್ಯಾಲಿಡಿಟಿ…!