ಪರೀಕ್ಷೆಗೆ ಹೋಗುವಾಗ ಅಪಘಾತ ಸಂಭವಿಸಿ, ವಿದ್ಯಾರ್ಥಿನಿಯೊಬ್ಬರು ಡ್ರಿಪ್ಸ್ ಹಾಕಿಕೊಂಡೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.
ಬಿಹಾರದ ಶಾರೈರಾಂಜನ್ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ಮ ಗ್ರಾಮದ ನಿವಾಸಿ ಶ್ವೇತಾ ಕುಮಾರಿ ಹೀಗೆ ಡ್ರಿಪ್ಸ್ ಹಾಕಿಕೊಂಡು ಪರೀಕ್ಷೆ ಬರೆದವರು.
ಬಿಹಾರದಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೀತಿದೆ. ಶ್ವೇತ ಅವರು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಾಗ ಬಿಹಾರದ ಸಮಸ್ತಿ ಪುರದಲ್ಲಿ ಬೊಲೇರಾ ಒಂದು ಡಿಕ್ಕಿ ಹೊಡೆದಿದ್ದು, ಇದರಿಂದ ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆ ಕರೆದೊಯ್ಯಲಾಯಿತು.ನಂತರ ಆ್ಯಂಬುಲೆನ್ಸ್ ನಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಡ್ರಿಪ್ಸ್ ಹಾಕಿಕೊಂಡೇ ಪರೀಕ್ಷೆ ಬರೆದು ಸಾಹಸ ಮೆರೆದಿದ್ದಾರೆ.