ನೀವೆಲ್ಲಾ ಪುನರ್ ಜನ್ಮ ಬಗ್ಗೆ ಕೇಳಿರ್ತಿರ ಅಲ್ವಾ..! ಹಿಂದಿನ ಜನ್ಮದಲ್ಲಿ ನಾವೇನಾಗಿ ಬದುಕಿದ್ವಿ ಅಂತ ನಮಗೆ ಹಿಂದಿನ ಲೋಕಕ್ಕೆ ಮತ್ತೆ ಕರೆದುಕೊಂಡೋಗ್ತಾರೆ ಮಹಾನ್ ವ್ಯಕ್ತಿಗಳು. ಆದ್ರೆ ಇದೇ ಜನ್ಮದಲ್ಲಿ ಸತ್ತು 40 ವರ್ಷಗಳ ಬಳಿಕ ಮತ್ತೆ ಪ್ರತ್ಯಕ್ಷ ಆದ್ರೆ ಹೆಂಗಿರುತ್ತೆ..! ಇಂತಹದೊಂದು ಅಚ್ಚರಿ ಹಾಗೂ ಕುತೂಹಲಕಾರಿ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು ಚರ್ಚೆಗೆ ಗ್ರಾಸವಾಗ್ತಿದೆ..! ಬಿದ್ನೂ ಎಂಬ ಗ್ರಾಮದ 82 ವರ್ಷದ ವಿಲಾಸ ಎಂಬ ಮುದುಕಿಯೆ ಈಗ ಬದುಕಿ ಬಂದಿರೋದು. ಆಶ್ಚರ್ಯ ಏನಂದ್ರೆ ಈ ಮುದುಕಿ 1967ರಲ್ಲಿಯೇ ಹಾವು ಕಡಿದು ಸತ್ತಿದ್ದಳು ಎಂದು ಕುಟುಂಬಸ್ಥರು ಹೇಳ್ತಾ ಇದ್ದಾರೆ. ಅಷ್ಟೆ ಅಲ್ಲ ಕುಟುಂಬಸ್ಥರ ಎದುರೆ ಈ ಮಹಿಳೆಯ ಅಂತ್ಯಕ್ರಿಯೆ ಕಾರ್ಯನೂ ಆಗಿತ್ತಂತೆ..! ಆ ಮಹಿಳೆಯ ಚಿತಾಭಸ್ಮವನ್ನೂ ಕೂಡ ಗಂಗಾ ನದಿಗೆ ಬಿಡಲಾಯ್ತು ಅಂತ ಹೇಳ್ತಾ ಇದಾರೆ..! ಆದ್ರೆ ಆ ಮಹಿಳೆ ಮಾತ್ರ 40 ವರ್ಷಗಳ ನಂತರ ವಾಪಸ್ ತನ್ನ ಮನೆಗೆ ಬಂದಿದ್ದಾಳೆ..! ಇದನ್ನು ಕಂಡ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ದಂಗಾಗಿ ಹೋಗಿದ್ದಾರೆ ನೋಡಿ. ಹಾವು ಕಚ್ಚಿ ನಾನು ಮೃತ ಪಟ್ಟಿಲ್ಲ. ಮೂರ್ಛೆ ಹೋಗಿದ್ದ ನನ್ನನ್ನು ದೋಣಿಯವರು ರಕ್ಷಿಸಿ ನನ್ನನ್ನು ಪಕ್ಕದ ಗ್ರಾಮದ ದೇವಸ್ಥಾನದಲ್ಲಿ ಬಿಟ್ಟೋಗಿದ್ರು ಅಂತಾಳೆ ವಾಪಾಸ್ಸಾದ ಮಹಿಳೆ..! ಆಕೆಯ ಇಬ್ಬರು ಪುತ್ರಿಯರಾದ ರಾಮ್ ಕುಮಾರಿ ಹಾಗೂ ಮುನ್ನಿ, ತಮ್ಮ ತಾಯಿಯನ್ನು ಅವಳ ದೇಹದಲ್ಲಿದ್ದ ಗುರುತು ಚಿನ್ಹೆಯಿಂದ ಕಂಡು ಹಿಡಿದಿದ್ದಾರೆ..! ಈಗ ಮನೆಯ ಸದಸ್ಯರಿಗೂ ಹಾಗೂ ಗ್ರಾಮಸ್ಥರಿಗೂ ಕಾಡ್ತಾ ಇರೋ ಪ್ರಶ್ನೆ ಅಂದು ನಾವು ಯಾರ ಅಂತ್ಯ ಸಂಸ್ಕಾರ ಮಾಡಿದ್ವಿ ಅನ್ನೋದು..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಫೋಬ್ರ್ಸ್ ಶ್ರೀಮಂತ ಸೆಲಿಬ್ರಿಟಿಗಳಲ್ಲಿ ವಿರಾಟ್ ಕೋಹ್ಲಿಗೆ 3ನೇಸ್ಥಾನ
ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!
ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!
ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ
ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!