ದುಷ್ಕರ್ಮಿಗಳು 60 ವರ್ಷದ ವೃದ್ಧೆಯ ಮೇಲೆ 10 ಬಾರಿ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ನಿಚೇತರ್ ಕೌರ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವೃದ್ಧೆ. 2016ರಲ್ಲಿ ನಿಚೇತರ್ ಕೌರ್ ಅವರ ಪತಿಯನ್ನು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧೆಯ ಪತಿಯನ್ನು ಕೊಲೆ ಮಾಡಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಕೆಲವು ಸಂಬಂಧಿಕರು ಜೈಲು ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ ಕೌರ್ ಮತ್ತು ಪುತ್ರ ಬಲ್ವಿಂದರ್ ಇಂದು (ಗುರುವಾರ) ಸಾಕ್ಷಿ ಹೇಳಲು ಕೋರ್ಟ್‍ಗೆ ಹೋಗ್ಬೇಕಿತ್ತು.
ಆದರೆ ಬುಧವಾರ ಇವರ ಮನೆಯ ಬಳಿ ಬಂದ ಮೂವರು ದುಷ್ಕರ್ಮಿಗಳು ಮನೆ ಹೊರಗಡೆಯ ಮಂಚದ ಮೇಲೆ ಕುಳಿತಿದ್ದ ಕೌರ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಕೇವಲ ಎರಡು ಅಡಿ ಅಂತರಿಂದ 10 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದು ಮನೆಯ ಎದುರು ಅಳವಡಿಸಿದ್ದ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.
ಅದೆರೀತಿ ಕೌರ್ ಅವರ ಮಗ ಬಲ್ವಿಂದರ್ ಅವರನ್ನು ಗ್ರಾಮದ ಬಳಿ ಗುಂಡು ಹಾರಿಸಿ ಕೊಂದಿದ್ದಾರೆ.