ಕಣ್ಣಿಗೆ ಕಾಣುವ ದೇವರು ಅಂದ್ರೆ ಅದು ಅಮ್ಮ. ಈ ತಾಯಿಗೆ ದೇವರ ಸ್ಥಾನ ನೀಡೋಕೆ ಕಾರಣ ಆಕೆಯ ನಿಸ್ವಾರ್ಥ ಸೇವೆ ಹಾಗೂ ಆಕೆ ಸೌಮ್ಯ ಸ್ವಭಾವದ ಪ್ರೀತಿಗೆ. ಆದ್ರೆ ಇಲ್ಲೋರ್ವ ತಾಯಿ ಮಾಡಿದ ನೀಚ ಕೃತ್ಯ ಕಂಡರೆ ಜಗತ್ತಿನಲ್ಲಿ ಇಂತಹ ತಾಯಂದಿರೂ ಇರ್ತಾರಾ..? ಅನ್ನೊ ಅಚ್ಚರಿ ಮೂಡುತ್ತೆ..! ಗಂಡ ಹೆಂಡತಿಯ ನಡುವಿನ ಕಲಹಕ್ಕೆ ಬಲಿಯಾದದ್ದು ಮಾತ್ರ ಏನು ಅರಿಯದ ಈ ಮುಗ್ದ ಕಂದಮ್ಮ. ಹೌದು.. ಗಂಡ ಹೆಂಡತಿಯ ಜಗಳ ತಾರಕಕ್ಕೇರಿದ ಪರಿಣಾಮವಾಗಿ ನಿರ್ದಯಿ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೆ ಅಟ್ಟದ ಮೇಲಿಂದ ಬಿಸಾಕಿದ ಹೃದಯ ವಿದ್ರಾವಕ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ..! ತನ್ನ ಗಂಡನ ಜೊತೆ ಜಗಳವಾಡ್ತಾ ಇದ್ದಾಗ ಸಿಟ್ಟಿನ ಭರದಲ್ಲಿ ತನ್ನ ಮಗುವನ್ನು ಮೆಟ್ಟಿಲಿನಿಂದ ಬಿಸಾಕಿ ತನ್ನ ಕೃತ್ಯ ಮೆರೆದಿದ್ದಾಳೆ. ಎರಡೂವರೆ ವರ್ಷದ ಮಗುವನ್ನು ಮೆಟ್ಟಿಲಿಂದ ಎಸೆದಿದ್ದ ಹೆಂಡತಿಯ ವಿರುದ್ದ ಗಂಡ ಹತ್ಯೆ ಪ್ರಯತ್ನದಡಿ ದೂರು ನೀಡಿದ್ದು, ಕೊಲೆ ಯತ್ನ ಕೇಸನ್ನು ದಾಖಲು ಮಾಡಲಾಗಿದೆ. ಮಗುವಿನ ಮುಖ ಸೇರಿದಂತೆ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ತಾಯಿ ಈ ರೀತಿಯ ಕೃತ್ಯ ಎಸಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಮಗುವಿನ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಜಗಳವಾಗಿದೆ ಎಂದು ತಿಳಿಸಿದ್ದಾರಷ್ಟೆ. ಆದ್ರೆ ಇಷ್ಟು ಸಣ್ಣ ವಿಚಾರಕ್ಕೆ ಹೆತ್ತ ಮಗುವನ್ನೆ ಬಿಸಾಕುವ ತಾಯಿಯ ಮನಸ್ಥಿತಿಗೆ ಏನನ್ನಬೇಕೋ ಏನೊ..?
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ನಕಲಿ ಅಪ್ಪ-ಅಮ್ಮನಿಂದ ಬ್ಲ್ಯಾಕ್‍ಮೇಲ್: ನಟ ಧನುಷ್ ಆರೋಪ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್