ಮಹಿಳೆಯ ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ ರಾಷ್ಟೀಯ ಹೆದ್ದಾರಿ ಬಳಿ ಎಸೆದು ಹೋಗಿರುವ ಘಟನೆ ಹರಿಯಾಣದ ರೆವಾರಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ, ಬಾವಲ್ ಪಟ್ಟಣಕ್ಕೆ ಸಮೀಪದ ಓದಿಹಳ್ಳಿ ಬಳಿಯ ಹಳ್ಳದಲ್ಲಿ ಸಿಕ್ಕ ಸೂಟ್ ಕೇಸ್ ನಲ್ಲಿ ಶವ ಪತ್ತೆಯಾಗಿದೆ.
ಮಹಿಳೆ ಅಪರಿಚಿತರು.ಕೊಲೆ ಎಂದು ಪರಿಗಣಿಸಲಾಗಿದೆ. ಬಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾವಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಸೂಟ್ ಕೇಸ್ ಓಧಿ ಗ್ರಾಮದ ಬಳಿಯ ರಸ್ತೆಯ ಬದಿ ಚರಂಡಿಯಲ್ಲಿ ಬಿದ್ದಿರುವುದನ್ನು ಗ್ರಾಮಸ್ಥರು ನೋಡಿದ್ದರು. ಯಾರೂ ಸೂಟ್ ಕೇಸ್ ಮುಟ್ಟಿರಲಿಲ್ಲ. ಸಂಜೆಯವರೆಗೂ ಸೂಟ್ ಕೇಸ್ ತೆಗೆದುಕೊಳ್ಳಲು ಯಾರೂ ಬರದೇ ಇದ್ದಾಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ಮಹಿಳೆ ಶವ ಪತ್ತೆಯಾಗಿದೆ.