ಒಂದೇ ಲಿಂಗಿಗಳು ಅಂದ್ರೆ ಒಂದೇ ಸೆಕ್ಸ್ ನವರು ಪರಸ್ಪರ ಮದ್ವೆ ಆಗೋದು ಈಗ ಒಪ್ಪಿತ. ಸಲಿಂಗಿಗಳು ಮದ್ವೆ ಆಗ್ತಿದ್ದಾರೆ. ಇದು ಅಪರೂಪ. ಆದ್ರೆ , ಇಲ್ಲೊಂದು ಊರಲ್ಲಿ ಹೆಣ್ಣನ್ನು ಹೆಣ್ಣು ಮದ್ವೆ ಆಗೋದು ಸಂಪ್ರದಾಯವಾಗಿದೆ.
ತಾಂಜನಿಯಾದ ಊರೊಂದರಲ್ಲಿ ಒಂದೇ ಲಿಂಗಿಯರು ಮದ್ವೆ ಆಗೋದು ಅಲ್ಲಿನ ಸಂಪ್ರದಾಯ, ಪರಂಪರೆ. ಹಾಗಂತ ಇವ್ರು ಲೆಸ್ಬಿಯನ್ ಅಲ್ಲ…! ಮನೆಯಲ್ಲಿ ತಮ್ಮದೇ ಅಧಿಕಾರಿ ನಡೆಯಬೇಕು ಎನ್ನೋ ಕಾರಣದಿಂದ ಹೀಗೆ ಮದ್ವೆ ಆಗ್ತಾರೆ.
ಯಾರೋ ಹೊರಗಿನ ಪುರುಷರು ಬಂದು ತಮ್ಮ ಮನೇಲಿ ಅಧಿಕಾರ ಚಲಾಯಿಸಬಾರದು ಎಂದು ಮಹಿಳೆಯರು ಹೀಗೆ ಮಾಡುತ್ತಾರೆ. ಪುರುಷರು ಇವರ ಆಸ್ತಿಯನ್ನು ಪಡೆಯಲು ಪ್ರಯತ್ನಿಸಿದರೆ ಅವ್ರಿಗೆ ಶಿಕ್ಷೆ ಆಗುತ್ತಂತೆ. ಆಸ್ತಿಯ ಸಂಪೂರ್ಣ ಹಕ್ಕುಪಡೆಯಲು ಹೆಣ್ಣು ಹೆಣ್ಣನ್ನೇ ಮದ್ವೆ ಆಗೋದು.