ಕವಿತಾ ದೇವಿ, ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ. ಪ್ರವೃತ್ತಿಯಲ್ಲಿ ದೊಡ್ಡ ಕುಸ್ತಿ ಪಟು. ಭಾರತೀಯ ಕುಸ್ತಿರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಈ ಶತಮಾನದ ಮಾದರಿ ಹೆಣ್ಣು ಎಂದು ಕರೆಯಲ್ಪಡುತ್ತಾರೆ. ಎರಡು ವರ್ಷಗಳ ಹಿಂದೆ ದುಬೈನಲ್ಲಿ ನಡೆದಿದ್ದ WWE ದುಬೈ ಟ್ರೈಔಟ್ ನಲ್ಲಿ ಸ್ಪರ್ಧಿಸಿದ್ದ ಕವಿತಾ ದೇವಿ ಭಾರೀ ಹೆಸರು ಮಾಡಿದ್ರು.
ಜೂನ್ 13, 2016ರಲ್ಲಿ ಯೂಟ್ಯೂಬ್ ನಲ್ಲಿ ಕವಿತಾ ಅವರ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಇದರಲ್ಲಿ ಕವಿತಾ ದೇವಿ BB BULL BULL ಅವರ ಓಪನ್ ಚಾಲೆಂಜ್ ನ್ನು ಎಲ್ಲರ ಸಮ್ಮುಖದಲ್ಲಿ ಸ್ವೀಕರಿಸಿ ಜಯವನ್ನು ಗಳಿಸಿದ್ದರು. ಈ ವಿಡಿಯೋ ನೆನಪಿದೆಯಾ? ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಮಾಜಿ ವೇಟ್ ಲಿಫ್ಟರ್ ಕವಿತಾ ದೇವಿ.
ಆಗ WWE ಸೆಣಸಾಟದಲ್ಲಿ ಕವಿತಾ ದೇವಿ ಸೆಲ್ವಾರ್ ಕಮೀಜ್ ಧರಿಸಿದ್ದರು. ಸಾಮಾನ್ಯವಾಗಿ WWE ಕುಸ್ತಿಯಲ್ಲಿ ಸ್ಪರ್ಧಿಗಳು ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ತುಂಡುಡುಗೆ ಬಟ್ಟೆಯಲ್ಲಿ ಕಣಕ್ಕಿಳಿಯುತ್ತಾರೆ. ಆದರೆ ಕವಿತಾ ಪೂರ್ಣ ಪ್ರಮಾಣದಲ್ಲಿ ದೇಹ ಮುಚ್ಚುವ ಬಟ್ಟೆಗಳನ್ನು ಧರಿಸಿ ಸ್ಪರ್ಧೆಗಿಳಿದು ಭರ್ಜರಿಯಾಗಿ ಫೈಟ್ ಮಾಡಿರುವ ವಿಡಿಯೋವೀಗ ವೈರಲ್ ಆಗುತ್ತಿದೆ. ಕೇವಲ 5 ದಿನದಲ್ಲಿ ಈ ವಿಡಿಯೋವನ್ನು ಮೂರು ಮಿಲಿಯನ್ ಜನರು ವೀಕ್ಷಿಸಿದ್ದರು.
ಇನ್ನು ಕವಿತಾ ದೇವಿ, WWE ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಹರಿಯಾಣದ ಕವಿತಾ ಅವರು ಸದ್ಯ ಪಂಜಾಬ್ ರಾಜ್ಯದಲ್ಲಿ ಪೊಲೀಸ್ ಅಧಿಕಾರಿ. WWE ಮಾಜಿ ವಿಶ್ವ ಚಾಂಪಿಯನ್ ದಿ ಗ್ರೇಟ್ ಖಲಿ ಅವರ ಅಕಾಡೆಮಿಯಲ್ಲಿ ಕುಸ್ತಿ ತರಬೇತಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅಮೆರಿಕದ ಪ್ಲೋರಿಡಾದಲ್ಲಿನ ಓಲ್ತ್ಯೋಂಡೊ ನಗರದಲ್ಲಿ ನಡೆದ WWE ಗೆ ಆಯ್ಕೆ ಯಾಗುವ ಮೂಲಕ ಭಾರತೀಯ ಕುಸ್ತಿರಂಗದಲ್ಲಿ ನೂತನ ಇತಿಹಾಸ ಬರೆದ್ರು.
ನ್ಯೂಜಿಲೆಂಡ್ ನ ಡಕೋಟಾ ಕಾಯ್ ಅವರ ವಿರುದ್ಧ ಸ್ಪರ್ಧಿಸಿದ ಕವಿತಾ ದೇವಿ ವೀರಾವೇಷದಿಂದ ಹೋರಾಡಿದರು. ಮತ್ತೆ ಕವಿತಾ ದೇವಿ ಅವರು, ಮೇ ಯಂಗ್ ಕ್ಲಾಸಿಕ್ ಎನ್ನುವ ಹೆಸರಿನ ಪಂದ್ಯಾವಳಿಯಲ್ಲಿ ಭಾಗವಹಿಸಿ, ವಿಶ್ವದ ವಿವಿಧ ಭಾಗಗಳಿಂದ ಆಯ್ಕೆಗೊಂಡಿರುವ ಅಗ್ರ 31 ಕುಸ್ತಿಪಟುಗಳೊಂದಿಗೆ ಸೆಣಸಾಟ ನಡೆಸಿದ್ರು. ಭಾರತದ ಮಾಜಿ ಪವರ್’ಲಿಫ್ಟರ್ ಮತ್ತು ಎಂಎಂಎ ಫೈಟರ್ ಕವಿತಾ WWE ಚಾಂಪಿಯನ್ ದ ಗ್ರೆಟ್ ಖಲಿ ಅವರ ಗರಡಿಯಲ್ಲಿ ಪಳಗಿದವರು.
WWE ದಿ ಗ್ರೇಟ್ ಖಲಿ ಶಿಷ್ಯೆ ಕವಿತಾ ದೇವಿ ಮೊದಲ ವಿಶ್ವ ಕುಸ್ತಿ ಎಂಟರ್ ಟೈನ್ ಮೆಂಟ್ ಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿ ಈಗ ವಿಶ್ವಮಾನ್ಯವಾಗಿದ್ದು, WWE ಮಹಿಳಾ ಟೂರ್ನಿಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಅನೇಕ ಮಹಿಳೆಯರಿಗೆ ಸ್ಫೂರ್ತಿಯ ಶಕ್ತಿ ಆಗಿದ್ದಾರೆ.