ರಾಕಿಂಗ್ ಸ್ಟಾರ್ ಯಶ್ ಎರಡು ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ…..
ಹೌದು, ಆಶ್ಚರ್ಯ ಅನಿಸಿದರೂ ಇದು ಸತ್ಯ. ಹಾಗಂತ ಯಶ್ ಯಾವ ಪಕ್ಷದ ಪರವಾಗಿಯೂ , ವಿರುದ್ಧವಾಗಿಯೂ ಇಲ್ಲ. ತಮ್ಮ ತವರು ಕ್ಷೇತ್ರದಲ್ಲಿ ಸ್ನೇಹ ಪೂರ್ವಕವಾಗಿ ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಕೆ. ಆರ್ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಪರ ಪ್ರಚಾರ ನಡೆಸುವರು. 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಯಶ್ ರೋಡ್ ಶೋ ನಡೆಸುವರು.
ಸಂಜೆ 6 ಗಂಟೆಗೆ ಮೈಸೂರಿನ ಕೆ. ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ರಾಮದಾಸ್ ಪರ ಯಶ್ ಪ್ರಚಾರ ಮಾಡುತ್ತಾರೆ. ಗನ್ ಹೌಸ್ ವೃತ್ತದಿಂದ ರಾಮದಾಸ್ ಪರ ರೋಡ್ ಶೋ ನಡೆಸುತ್ತಾರೆ.
ಈ ವರೆಗೂ ಈ ಚುನಾವಣೆಯಲ್ಲಿ ಯಾರ ಪರವೂ ಪ್ರಚಾರ ಮಾಡದ ಯಶ್ ಸ್ನೇಹಿತರ ಪರ ಪ್ರಚಾರಕ್ಕಿಳಿದಿದ್ದಾರೆ.