ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೇ ನಿಮಗಿದು ನಿಜಕ್ಕೂ ನಿರಾಶೆ ಉಂಟು ಮಾಡೋ ಸುದ್ದಿ..! ಇದನ್ನು ಓದಿದ ನೀವು ಬೇಜಾರ್ ಮಾಡ್ಕೊಳ್ಬೇಡಿ…!
ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ಈ ವರ್ಷ ತೆರೆಕಾಣೋದು ಅನುಮಾನ…! ಕೆಜಿಎಫ್ ಚಿತ್ರ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಆಗುತ್ತೆ ಅಂತ ಹೇಳಲಾಗ್ತಿತ್ತು. ಆದರೆ, ಸಿನಿಮಾ ಶೂಟಿಂಗ್ ನಡೀತಾ ಇದ್ದು, ಡಿಸೆಂಬರ್‍ನಲ್ಲಿ ರಿಲೀಸ್ ಆಗೋದು ಡೌಟ್. ಮುಂದಿನ (2018ರ) ಯುಗಾದಿ ವೇಳೆಯಲ್ಲಿ ತೆರೆಕಾಣಲಿದೆ ಎಂದು ಹೇಳಲಾಗ್ತಾ ಇದೆ.
ಯಶ್ ಅಭಿನಯದ ಕೆಜಿಎಫ್ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ. ಈ ಸಿನಿಮಾಕ್ಕೆ ವಿಜಯ್ ಕಿರ್ಗಾಂದೂರ್ ಬಂಡವಾಳ ಹಾಕ್ತಿದ್ದಾರೆ.