ರಾಧಿಕಾ ಪಂಡಿತ್ ತನ್ನ ಪತಿ ಯಶ್ ಅವರು ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ,ತಮಾಷೆಯ ಮಾತುಗಳನ್ನಾಡಿದ್ದಾರೆ.

ಹೌದು ರಾಧಿಕಾ ಪಂಡಿತ್ ಇತ್ತೀಚೆಗೆ ತನ್ನ ಸಹೋದರನ ಮಗುವನ್ನು ಮಡಿಲಲ್ಲಿ ಹಾಕಿಕೊಂಡಿರುವ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದರು.

ಇದೀಗ ರಿಯಾಳನ್ನು ಎತ್ತಿಕೊಂಡಿರುವ ಯಶ್ ಅವರ ಫೋಟೋ ಪೋಸ್ಟ್ ಮಾಡಿ, ಬಹುಶಃ ರಿಯಾಗೆ ಅಂಕಲ್ ಯಶ್ ಅವರ ಗಡ್ಡ ಇಷ್ಟವಾಗಿರಬೇಕು. ಇಲ್ಲ, ಅದನ್ನು ತೆಗಿ ಅಂತ ಹೇಳುತ್ತಿರಬೇಕು ಎಂದು ಬರೆದುಕೊಂಡಿದ್ದಾರೆ.






