ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ!
ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ವಿಧಿವಶರಾಗಿದ್ದಾರೆ. ಮಂಜಮ್ಮ ಅವರಿಗೆ ಕಿಡ್ನಿ ಸಮಸ್ಯೆ ಇತ್ತು. ಆದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಮಂಜಮ್ಮ ಅವರು ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿಯ ಗ್ರಾಮದವರು. ಇವರಿಗೆ ರತ್ನಮ್ಮ ಅನ್ನೋ ಸಹೋದರಿ ಇದ್ದಾರೆ. ಈ ಇವರಿಬ್ಬರು ದಂಡಿನ ಮಾರಮ್ಮ ದೇವಸ್ಥಾನದ ಮುಂದೆ ಹಾಡು ಹೇಳಿ ರಂಜಿಸುತ್ತಿದ್ದರು. ಇವರ ಪ್ರತಿಭೆಯನ್ನು ನೋಡಿದ ಸರಿಗಮಪ ವೇದಿಕೆ ಅವಕಾಶ ಕೊಡಿಕೊಟ್ಟಿತ್ತು. ಜೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ಹಾಡುವ ಮೂಲಕ ಮತ್ತಷ್ಟು ಜನಪ್ರಿಯಗೊಂಡಿದ್ದರು.