ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

Date:

ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಬೆಂಗಳೂರು ಉತ್ತರ-1, ಬೆಂಗಳೂರು ಪೂರ್ವ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಅನೇಕಲ್ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಮಹಿಳಾ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಅಂಗನವಾಡಿ ಕಾರ್ಯಕರ್ತೆ : 55
ಅಂಗನವಾಡಿ ಸಹಾಯಕಿ : 209
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-11-2020

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-12-2020

ಅರ್ಜಿ ಸಲ್ಲಿಸಲು ವೆಬ್‌ ವಿಳಾಸ : www.anganwadirecruit.kar.nic.in
ಅಂಗನವಾಡಿ ಕಾರ್ಯಕರ್ತೆಯಾಗಲು 10ನೇ ತರಗತಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯಾಗಲು ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು ಗರಿಷ್ಠ ವಿದ್ಯಾರ್ಹತೆ 9 ನೇ ತರಗತಿ ನಿಗದಿಪಡಿಸಲಾಗಿದೆ.

ಕೊಹ್ಲಿ ಇಲ್ದೆ ಇದ್ರು ತೊಂದ್ರೆ ಇಲ್ಲ, ನಾಯಕರಾಗಲು ನಾಲ್ವರಿದ್ದಾರೆಂದ ವಾರ್ನರ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಜನವರಿಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಗುವಿನ ಜನ್ಮ ನೀಡಲಿದ್ದು, ಆ ಕಾರಣ ಕೊಹ್ಲಿ ಪತ್ನಿ ಜೊತೆ ಕಾಲ ಕಳೆಯಲು ಬಯಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಅವರು ಮೊದಲ ಟೆಸ್ಟ್ ಬಳಿಕ ಭಾರತಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅವರ ಮನವಿ ಪುರಸ್ಕರಿಸಿರುವ ಬಿಸಿಸಿಐ ಪಿತೃತ್ವ ರಜೆಯ ಮೇಲೆ ಅವರಿಗೆ ಬಿಡುವು ನೀಡಿದೆ. ಮೊದಲ ಟೆಸ್ಟ್ ಬಳಿಕ ಅವರ ತವರಿಗೆ ಮರಳಲಿದ್ದು ಉಳಿದ ಟೆಸ್ಟ್ ಪಂದ್ಯಗಳಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮಾತನಾಡಿದ್ದು, ಕೊಹ್ಲಿ ಇಲ್ದೆ ಇದ್ರೆ ನೋ ಪ್ರಾಬ್ಲಮ್. ಟೀಮ್ ಇಂಡಿಯಾದಲ್ಲಿ ನಾಯಕರಾಗಲು ಮೂರ್ನಾಲ್ಕು ನಾಯಕರಾಗಲು ಅರ್ಹರಿದ್ದಾರೆ ಎಂದು ಹೇಳಿದ್ದಾರೆ.
“ರಹಾನೆ ಅವರದ್ದು ಶಾಂತ ಸ್ವಾಭಾವದ ವ್ಯಕ್ತಿತ್ವ. ಮತ್ತು ಯೋಚನೆ ಮಾಡಿ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೆ ನೋಡಿದರೆ ಭಾರತ ತಂಡದಲ್ಲಿ ಯಾವುದೇ ಸಮಯದಲ್ಲಿ ನಾಯಕತ್ವಕ್ಕೆ ಅರ್ಹರಾಗಿರುವ ಆಟಗಾರರು ಮೂರರಿಂದ ನಾಲ್ಕು ಜನರಿದ್ದಾರೆ” ಎಂದು ವಾರ್ನರ್ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಮೂರು ತಿಂಗಳ ದೀರ್ಘಕಾಲಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ.
ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.

ಕೋಟಿ ಕೋಟಿ ದುಡ್ಡಿದ್ರೂ ಆತ ಕೂಲಿ ಆಗಿದ್ಹೇಕೆ?

ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ ತಿಂಗಳ ಸಂಬಳಕ್ಕಾಗಿ ದುಡಿಯುವಂತೆ ಕೇರಳಕ್ಕೆ ಕಳುಹಿಸಿದ್ದಾರೆ!! ಆಶ್ಚರ್ಯವಾದರೂ ನೀವು ನಂಬಲೇ ಬೇಕು. ಹೌದು, ಇದು ಅಚ್ಚರಿಯನಿಸಿದರು ನಿಜ. ವಿಶ್ವದ ಸುಮಾರು 71 ದೇಶಗಳಲ್ಲಿ ಕಂಪನಿ ಹೊಂದಿರುವ ಸೂರತ್ ಮೂಲದ ಗುಜರಾತಿ ವಜ್ರ ವ್ಯಾಪಾರಿ ಸಾವಜಿ ಢೋಲಕಿಯ ಅವರು ತಮ್ಮ ಮಗನಾದ ದ್ರವ್ಯ ಢೋಲಕಿನ್ನು ತಿಂಗಳ ಸಂಬಳಕ್ಕೆ ದುಡಿಯಲು ಕಳುಹಿಸಿದ್ದರು.
ಅಮೆರಿಕದಲ್ಲಿ ಎಂಬಿಎ ವ್ಯಾಸಂಗ ಮಾಡಿದ ದ್ರವ್ಯ, ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದರು. ಆದರೆ ಅವರ ತಂದೆ ರಜಾ ಅವಧಿಯಲ್ಲಿ ಎಲ್ಲಿಯಾದರೂ ಕೆಲಸ ಮಾಡು ಅಂತ ಹೇಳಿ, ಅಪ್ಪನ ಆಶಯಾದಂತೆ ದ್ರವ್ಯ ಡೋಲಕಿ 3 ಜೊತೆ ಬಟ್ಟೆ, 7000 ರೂಪಾಯಿ ಹಣದೊಂದಿಗೆ ಕೇರಳಕ್ಕೆ ಆಗಮಿಸಿ, ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯಂತೆಯೇ ಕೂಲಿ ಮಾಡಿ ಕಷ್ಟ ಅರಿತುಕೊಂಡಿದ್ದಾರೆ.


ತಂದೆ ಸಾವಜಿ ಢೋಲಕಿಯ ಹೇಳುವಂತೆ “ನಾನು ನನ್ನ ಪುತ್ರನಿಗೆ ಮೂರು ಷರತ್ತುಗಳನ್ನು ವಿಧಿಸಿದ್ದು, ಎಲ್ಲಿಯೂ ಸಹ ನನ್ನ ಹೆಸರು ಬಳಸದೆ, ಫೋನ್ ಕೂಡ ಬಳಕೆ ಮಾಡದೆ ಒಂದೇ ಜಾಗದಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನ ಇರದೆ ಬೇರೆ ಬೇರೆ ಕಡೆ ಒಂದು ತಿಂಗಳು ಕೆಲಸ ಮಾಡಿ ಸಂಬಳ ಪಡೆದು ಮರಳಬೇಕು” ಎಂದು ಸಾಮಾನ್ಯ ಜನರ ಕಷ್ಟ, ಬವಣೆ ಅರಿತು ಹಣದ ಮೌಲ್ಯದ ಬಗ್ಗೆ ತಿಳುವಳಿಕೆ ಬರಲಿ ಎಂದು ಈ ರೀತಿ ಮಾಡಿರುವುದಾಗಿ ಹರೆ ಕೃಷ್ಣ ವಜ್ರ ವ್ಯಾಪಾರ ಕಂಪನಿ ಮಾಲೀಕ ಸಾವಜಿ ಢೋಲಕಿಯ ತಿಳಿಸುತ್ತಾರೆ.
ಮೊದ ಮೊದಲು ಕೆಲಸ ಸಿಗುತ್ತದೆ ಎಂಬ ಹುಮ್ಮಸ್ಸಿನಲ್ಲಿ ಇದ್ದ ದ್ರವ್ಯ ಢೋಲಕಿ 6 ದಿನಗಳಾದರೂ ಕೆಲಸ ಸಿಗದಿದ್ದಾಗ ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡಿ ದಿನಕ್ಕೆ 250 ರೂಪಾಯಿ ಬಾಡಿಗೆಯ ಲಾಡ್ಜ್ನಲ್ಲಿ ನೆಲೆಸಿ ಊಟಕ್ಕೆ ಪರದಾಡಿ ಕಡೆಗೂ ಕಷ್ಟ ಅಂದರೆ ಏನೆಂದು ಅರಿತುಕೊಂಡು ಬಳಿಕ ಸೂರತ್ನ ತನ್ನ ಮನೆಗೆ ವಾಪಸ್ಸಾದರು. ಶ್ರೀಸಾಮಾನ್ಯರು ಎದುರಿಸುವ ದೈನಂದಿನ ಬವಣೆಗಳನ್ನು ಚೆನ್ನಾಗಿ ಅರಿತರು.


ತಂದೆ ಸಾವಜಿ ಢೋಲಕಿಯ ಹೇಳಿದಂತೆ ಪುತ್ರ ದ್ರವ್ಯ ಢೋಲಕಿ ನಡೆದುಕೊಂಡಿದ್ದಾರೆ. ಬಡತನ, ಸಿರಿತನ ಏನು ಅನ್ನೊಂದನ್ನು ಚೆನ್ನಾಗಿ ಅರಿತಿದ್ಧಾರೆ. ಇಂದು ದೇಶ-ವಿದೇಶದಲ್ಲಿ ದ್ರವ್ಯ ಢೋಲಕಿ ತಮ್ಮ ತಂದೆಯ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವರ ಉದ್ಯಮದಲ್ಲಿ ದುಡಿಯುತ್ತಿರುವವರನ್ನು ಕೂಡ ತಮ್ಮ ಸಂಬಂಧಿಗಳೆಂದು ಅವರಿಗೆ ಇರಲು ಮನೆ, ಓಡಾಡಲು ಕಾರು ನೀಡಿದ್ದಾರೆ.
ಅಳಾಗಿ ದುಡಿ ಅರಸನಾಗಿ ಬದುಕು ಎಂಬ ದೊಡ್ಡವರ ಮಾತಿನಂತೆ ನಡೆದಕೊಂಡ ಕೋಟ್ಯಾಧಿಪತಿ ಸಾವಜಿ ಢೋಲಕಿ ಅವರ ಪುತ್ರ ದ್ರವ್ಯ ಢೋಲಕಿ ನಡೆದುಕೊಂಡ ಪರಿ ನಿಜಕ್ಕೂ ಆದರ್ಶನೀಯ. ಯುವ ಜನರಿಗೆ ಸ್ಫೂರ್ತಿದಾಯಕ .

 

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...