ಶ್ರೀಲಂಕಾದ ಬೌಲಿಂಗ್ ಆಲ್ ರೌಂಡರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಶನಿವಾರ (ಜುಲೈ 31) ನಿವೃತ್ತಿ ಘೋಷಿಸಿದ್ದಾರೆ. ಭಾರತದ ಶ್ರೀಲಂಕಾ ಪ್ರವಾಸ ಮುಕ್ತಾಯವಾದ ಬೆನ್ನಲ್ಲೇ ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಇಸುರು ಉದಾನ ಶ್ರೀಲಂಕಾ ರಾಷ್ಟ್ರೀಯ ತಂಡದ ಪರ 21 ಏಕದಿನ ಪಂದ್ಯಗಳು, 34 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ ಆಡಿದ್ದಾರೆ.
21 ಏಕದಿನ ಪಂದ್ಯಗಳಲ್ಲಿ 237 ರನ್, 18 ವಿಕೆಟ್, 34 ಟಿ20ಐ ಪಂದ್ಯಗಳಲ್ಲಿ 256 ರನ್, 27 ವಿಕೆಟ್ ದಾಖಲೆ ಹೊಂದಿದ್ದಾರೆ. ಇನ್ನು 10 ಐಪಿಎಲ್ ಪಂದ್ಯಗಳಲ್ಲಿ 15 ರನ್, 8 ವಿಕೆಟ್ ದಾಖಲೆ ಹೊಂದಿದ್ದಾರೆ. ಉದಾನ ಅವರಿಗೀಗ 33ರ ಹರೆಯ.
ಉದಾನ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದು ಭಾರತ ವಿರುದ್ಧ 24 ಜುಲೈ 2012ರಲ್ಲಿ ಮಹಿಂದ ರಾಜಪಕ್ಸ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ. ಏಕದಿನ ಕಡೇ ಪಂದ್ಯ ಆಡಿದ್ದು ಕೂಡ ಭಾರತ ವಿರುದ್ಧ 18 ಜುಲೈನಲ್ಲಿ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ.