No menu items!
14.7 C
Munich
Thursday, July 23, 2026

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

Must read

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಪ್ರಸೆಂಟ್ಸ್ ನಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ ಮಾಡಲಾಯಿತು‌. ಪ್ರೊಡಕ್ಷನ್ ಸಂಸ್ಥೆ ಅಂದುಕೊಂಡಂತೆ ರಾಯರ ವರ್ಧಂತಿಯಂತೆ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಮಾಡಲಾಯಿತು.

ಮಂತ್ರಾಲಯದ ಈಗಿನ ಯತಿಗಳಾದ ಶ್ರೀ ಶ್ರೀ ಶ್ರೀ ಸುಬದೇಂದ್ರ ತೀರ್ಥರು ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಮಾಡಿದರು. ಈ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್, ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ , ಲಕ್ಷ್ಮೀ ಗಣೇಶ ಹಾಗೂ ಟಿಎನ್ ಐಟಿ ಸಂಸ್ಥೆಯ ಎಂಡಿ ಸುಗುಣಾ ರಘು, ಸಿಇಓ ಆಗಿರುವ‌ ರಘು ಭಟ್ ಉಪಸ್ಥಿತರಿದ್ದರು.

ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ‌ ಮಾತನಾಡಿದ ಗುರುಗಳು, ಒಂದು ಚಿತ್ರವನ್ನ ನೋಡಿ ಚನ್ನಾಗಿಲ್ಲ ಎನ್ನುವುದು ಸುಲಭ. ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಅದೇ ರೀತಿ ಶ್ರಮವಹಿಸಿ ಆಲ್ಬಂ ಸಾಂಗ್ ಮಾಡುತ್ತಿದ್ದಾರೆ. ಒಳ್ಳೆಯದಾಗಲಿ ಆದಷ್ಟು ಬೇಗ ಸಾಂಗ್ ರಿಲೀಸ್ ಆಗಲಿ ಎಂದು ಆಶಿರ್ವದಿಸಿದರು.

ಇನ್ನೂ ತಂಡದ ಬಗ್ಗೆ ಮಾಹಿತಿ ನೀಡುವುದಾದರೆ , ನಿರ್ಮಾಣ: ಸುಗುಣ ರಘು ಭಟ್
ನಿರ್ದೇಶನ: ರಘು ಭಟ್
​ಸಂಗೀತ: ಎಬಿಬಿಎಸ್ ಸ್ಟುಡಿಯೋ, ಸಿ.ಆರ್. ಬಾಬಿ ಹಾಗೂ ಅಜನೀಶ್ ಲೋಕನಾಥ್.
​ಸಾಹಿತ್ಯ: ನಾಗಾರ್ಜುನ ಶರ್ಮ
ಪ್ರಾಜೆಕ್ಟ್ ಹೆಡ್: ಶ್ರೀನಿಧಿ ಎಂ.ಕೆ. ಹಾಗೂ ಖುಷಿ.
ಡೈರೆಕ್ಟರ್ ಆಫ್ ಫೋಟೋಗ್ರಫಿ: ​ನಾಗೇಶ್ ವಿ ಆಚಾರ್ಯ.
ತಾಂತ್ರಿಕ ವರ್ಗ: ಮೀರಾ ಮಾಧವ, ದೊರೆಅರಸ್.
ಜಿಮ್ಮಿ: ಹರೀಶ್ ಮತ್ತು ತಂಡ.
ಪ್ರೊಡಕ್ಷನ್ ಹೆಡ್: ದರ್ಶನ್ ಯದುರಾಜ್.
ಪ್ರೊಡಕ್ಷನ್ ಟೀಮ್: ಯಶಸ್
ಸಿನಿಮಾಟೋಗ್ರಫಿ: ಪವನ್ ಎಂ. ಬಿ ಆಚಾರ್ಯ.
ಡ್ರೋನ್: ವಿಘ್ನೇಶ್ ಮೊಗವೀರ್.
ಸ್ಥಿರಛಾಯಗ್ರಹಣ: ಸಂಪತ್ ಪಾರ್ಸಿ ಡಿ.ಕೆ.
ಯೂನಿಟ್: ಬಿ. ಆರ್ ಮಲ್ಲಿಕಾರ್ಜುನ್ ಸಿನಿಲೈಟ್ ಸೇರಿದಂತೆ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಹಾಗೂ‌ ಟಿಎನ್ ಐಟಿ ಸಿಬ್ಬಂದಿ ಸಾಥ್ ನೀಡಿದ್ದಾರೆ.‌ ಸಾಂಗ್ ಆಲ್ ಭಾಗಶಃ ತಯಾರಾಗಿದ್ದು, ಪ್ರೇಕ್ಷಕರಿಗೆ ಸಮರ್ಪಿಸಲು ಸಿದ್ದವಾಗ್ತಿದೆ.

- Advertisement -spot_img

More articles

- Advertisement -spot_img

Latest article