ಅಂದು ಐಪಿಎಲ್ ಸರಿಯಿಲ್ಲ ಇಂದು ಐಪಿಎಲ್ ಬೇಕು ಎಂದ ಸ್ಟೇನ್!

Date:

ಕಳೆದ ಮಾರ್ಚ್ ತಿಂಗಳಿನಲ್ಲಿ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಬೇಡವಾಗಿದ್ದ ವಿವಾದವೊಂದನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಿಂತ ಪಾಕಿಸ್ತಾನ್ ಸೂಪರ್ ಲೀಗ್ ಉತ್ತಮ ಎಂದು ಹೇಳಿಕೆ ನೀಡಿದ್ದ ಡೇಲ್ ಸ್ಟೇನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು.

 

ಹೀಗೆ ಸಾಕಷ್ಟು ಟೀಕೆಗೆ ಒಳಗಾದ ನಂತರ ಎಚ್ಚೆತ್ತ ಡೇಲ್ ಸ್ಟೇನ್ ಐಪಿಎಲ್ ನನ್ನ ವೃತ್ತಿ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ನಾನು ಐಪಿಎಲ್ ಕುರಿತು ಕೆಟ್ಟದಾಗಿ ಮಾತನಾಡಿಲ್ಲ ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದರು. ಹೀಗೆ ಐಪಿಎಲ್ ವಿಚಾರದಲ್ಲಿ ವಿವಾದ ಹುಟ್ಟುಹಾಕಿದ್ದ ಡೇಲ್ ಸ್ಟೈನ್ ಇದೀಗ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುರಿತು ಮಾತನಾಡಿದ್ದಾರೆ.

 

ಐಪಿಎಲ್ ತಂಡದ ಆಡುವ ಬಳಗದಲ್ಲಿ ತನಗೆ ಸರಿಯಾದ ಅವಕಾಶ ನೀಡದೆ ತಂಡದಿಂದ ಹೊರಗಿಡುತ್ತಿದ್ದ ಕಾರಣವನ್ನು ನೀಡಿ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಡೇಲ್ ಸ್ಟೇನ್ ಇದೀಗ ಮತ್ತೆ ಐಪಿಎಲ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೌದು ‘ಪರ್ಪಲ್ ಕ್ಯಾಪ್ ಗೆಲ್ಲಬೇಕೆಂದರೆ ತಂಡದಲ್ಲಿ ಸ್ಥಾನ ನೀಡಬೇಕು ಹೀಗಿದ್ದಾಗ ಮಾತ್ರ ಉತ್ತಮ ಪ್ರದರ್ಶನವನ್ನು ನೀಡಲು ಸಾಧ್ಯ, ಮುಂದಿನ ಆವೃತ್ತಿಯಲ್ಲಿ ಐಪಿಎಲ್ ಆಡುವ ಅವಕಾಶವಿದ್ದರೆ ಖಂಡಿತ ಆಡುತ್ತೇನೆ’ ಎಂದು ಡೇಲ್ ಸ್ಟೇನ್ ಐಪಿಎಲ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...