ಯುವರಾಜ್ ಸಿಂಗ್ ವಿಶ್ವ ಕ್ರಿಕೆಟ್ ಕಂಡ ದಿಗ್ಗಜ.. ಸಿಕ್ಸರ್ಗಳ ಸರದಾರ… ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಟೀಮ್ ಇಂಡಿಯಾಕ್ಕೆ ಆಧಾರಸ್ತಂಭವಾಗಿದ್ದ ಹೆಮ್ಮೆಯ ಕ್ರಿಕೆಟಿಗ. ಕ್ಯಾನ್ಸರ್ ನಡುವೆಯೂ ಕ್ರಿಕೆಟ್ ಅಂಗಳದಲ್ಲಿ ಮಿಂಚಿನ ಆಟವಾಡಿ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟ ಕೆಚ್ಚೆದೆಯ ಹೋರಾಟಗಾರ.
ಭಾರತದ ಹೆಮ್ಮೆಯ ಮನೆಮಗ ಯುವಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ. ಯುವಿ ವಿದೇಶಗಳಲ್ಲಿ ನಡೆಯಲಿರುವ ಲೀಗ್ಗಳಲ್ಲಿ ಪಾಲ್ಗೊಳ್ಳಲು ಪ್ಲಾನ್ ಮಾಡಿದ್ದಾರೆ. ಈ ನಡುವೆ ನಟನೆಯಲ್ಲಿ ತೊಡಗಿಸಿಕೊಳ್ಳಲು ಹೊರಟಿದ್ದಾರೆ. ಅಂದಿನ ಸ್ಟಾರ್ ಕ್ರಿಕೆಟರ್, ಇಂದು ಆ್ಯಕ್ಟರ್ ..!
ಹೌದು, ಹಾಟ್ ಸ್ಟಾರ್ನ ‘ದಿ ಆಫೀಸ್’ ಎಂಬ ಇಂಟರ್ನ್ಯಾಷನಲ್ ಸೀರೀಸ್ ಹಿಂದಿಯಲ್ಲೂ ಬರ್ತಿದೆ. ಇದ್ರಲ್ಲಿ ಯುವಿ ಆ್ಯಕ್ಟ್ ಮಾಡಿದ್ದಾರೆ. ಹೊಸದನ್ನು ಟ್ರೈ ಮಾಡುವುದು ಯಾವಾಗಲೂ ಒಳ್ಳೆಯದು ವಿಭಿನ್ನವಾಗಿ ಏನಾದರೂ ಮಾಡಬೇಕು ಎನ್ನುವ ಯುವಿ ನಟನೆಯಲ್ಲಿಯೂ ಛಾಪು ಮೂಡಿಸಲು ಹೊರಟಿದ್ದಾರೆ.
ವಿಲ್ಕಿನ್ಸ್ ಚಾವ್ಲಾ ಎಂಬ ಪೇಪರ್ ಕಂಪನಿಯ ಉದ್ಯೋಗಿಗಳ ಬದುಕಿನ ಸುತ್ತ ಸುತ್ತುವ ಕಾರ್ಯಕ್ರಮ ದಿ ಆಫೀಸ್. ಈ 13 ಎಪಿಸೋಡ್ಗಳ ಸೀರಿಸ್ ನಲ್ಲಿ ಯುವಿ ಸಂದರ್ಶನಕ್ಕೆ ಬರುವ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ವಿಡಿಯೋ ರಿಲೀಸ್ ಆಗಿದೆ.
ಶೂಟಿಂಗ್ ಬಗ್ಗೆ ಹೇಳಿಕೊಂಡಿರುವ ಸಿಕ್ಸರ್ ಕಿಂಗ್ ಸಹಕಲಾದವಿರ ಜೊತೆ ಬಹಳ ಟೈಮ್ ಕಳೆದೆ. ಎಂಜಾಯ್ ಮಾಡಿದೆ ಎಂದಿದ್ದಾರೆ. ಒಟ್ಟಿನಲ್ಲಿ ಯುವಿ ನಟನೆಯಲ್ಲೂ ಸದ್ದು ಮಾಡಲು ಹೊರಟಿದ್ದಾರೆ.