No menu items!
6 C
Munich
Saturday, May 16, 2026

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

Must read

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದ ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಇಂದು ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದರು.

ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗ ಜಿಲ್ಲೆಯ 15 ಮಂದಿ ಸೇರಿದಂತೆ ಒಟ್ಟು 246 ಕನ್ನಡಿಗರು ಮಾರ್ಚ್ 4ರಂದು ರ್ಜಾ ದಿಂದ ಕೊಚ್ಚಿನ್ಗೆ ಬಂದಿಳಿದಿದ್ದರು. ಈ ಪೈಕಿ 50 ಮಂದಿಗೆ ಕೊಚ್ಚಿನ್‌ನಿಂದ ಬೆಂಗಳೂರಿಗೆ ಪ್ರಯಾಣಿಸುವಂತೆ ಶಾಸಕ B. ನಾಗೇಂದ್ರ ವಿಮಾನದ ವ್ಯವಸ್ಥೆ ಮಾಡಿದ್ದರು.

ಇಂದು ಬೆಳಿಗ್ಗೆ (ಮಾ.5) ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆಗ ಶಾಸಕ ನಾಗೇಂದ್ರ ಅವರು ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು.

ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಹಿನ್ನೆಲೆಯಲ್ಲಿ ಕನ್ನಡಿಗರು ಸಂತೋಷ ವ್ಯಕ್ತಪಡಿಸಿದ್ದು, ಸಂಕಷ್ಟದ ಸಮಯದಲ್ಲಿ ನೆರವಾದ ಶಾಸಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -spot_img

More articles

- Advertisement -spot_img

Latest article