ರಾಕಿಂಗ್ ಸ್ಟಾರ್ ಯಶ್ ಅವರನ್ನು ಭಾರತದ ಪ್ರಭಾವಶಾಲಿ ವ್ಯಕ್ತಿ ಎಂದು ಜಿಕ್ಯೂ ಸಂಸ್ಥೆ ಆರಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಿತು. ಯಶೋಮಾರ್ಗ ಅಡಿಯಲ್ಲಿ ಸಮಾಜಕ್ಕೆ ಒಳಿತಾಗುವಂತಹ ಕೆಲಸಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಯಶ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಇನ್ನು ಭಾರತದಾತ್ಯಂತ ಒಟ್ಟು ಐವತ್ತು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು ಇದರಲ್ಲಿ ಯಶ್ ಅವರು ಒಬ್ಬರು ಎಂಬುದು ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯ. ಇನ್ನು ಈ ಪ್ರಶಸ್ತಿಯನ್ನು ಪಡೆದ ನಂತರ ಯಶ್ ಅವರಿಗೆ ನಿಮಗೆ ಯಾವ ವ್ಯಕ್ತಿ ಆದರ್ಶ ಮತ್ತು ಸ್ಫೂರ್ತಿ ಎಂದು ಕೇಳಲಾಯಿತು.. ಈ ಪ್ರಶ್ನೆಗೆ ಯಶ್ ಅವರು ನೀಡಿದ ಉತ್ತರ ಇದೀಗ ಸಿನಿ ರಸಿಕರಲ್ಲಿ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ.
ಹೌದು ಸಂದರ್ಶನದಲ್ಲಿ ನಿಮಗೆ ಯಾವ ವ್ಯಕ್ತಿ ಸ್ಫೂರ್ತಿ ಮತ್ತು ಆದರ್ಶ ಎಂದು ಕೇಳಿದಾಗ ಶಂಕ್ರಣ್ಣ ಅವರು ಎಂದು ಯಶ್ ಅವರು ಉತ್ತರವನ್ನು ನೀಡಿದರು. ಇನ್ನು ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಯಶ್ ಅವರು ರಾಜಣ್ಣ ಅವರು ನನಗೆ ಸ್ಫೂರ್ತಿ ಮತ್ತು ಆದರ್ಶ ವ್ಯಕ್ತಿ ಎಂದು ಹೇಳಿಕೊಂಡಿದ್ದರು. ಈ ಎರಡೂ ಹೇಳಿಕೆಗಳನ್ನು ಗಮನಿಸಿದ ಸಿನಿರಸಿಕರು ಅಂದು ಯಶ್ ಅವರು ರಾಜಣ್ಣ ಅವರು ನನಗೆ ಸ್ಫೂರ್ತಿ ಎಂದು ಹೇಳಿದ್ದರು ಇದೀಗ ಶಂಕ್ರಣ್ಣ ಎಂದು ಹೇಳುತ್ತಿದ್ದಾರೆ ಇಬ್ಬರಲ್ಲಿ ಯಾರು ಇವರಿಗೆ ನಿಜವಾದ ಸ್ಫೂರ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಯಶ್ ಅವರು ಶಂಕ್ರಣ್ಣ ಅವರ ಜೊತೆ ರಾಜಣ್ಣ ಅವರ ಹೆಸರನ್ನು ಹೇಳದೇ ಇರುವುದು ಇದೀಗ ಬೇಸರಕ್ಕೂ ಕಾರಣವಾಗಿರುವುದು ನಿಜ..