ಮಹಮ್ಮದ್ ಸಿರಾಜ್.. ಬಡ ಕುಟುಂಬದಿಂದ ಬೆಳೆದು ಬಂದ ಪ್ರತಿಭೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ನಲ್ಲಿ ಆಡಿದ್ದ ಸಿರಾಜ್ ಪ್ರಶಂಸೆ ಗಿಂತ ಹೆಚ್ಚಾಗಿ ಅವಮಾನವನ್ನು ಅನುಭವಿಸಿದ್ದರು. ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿರಾಜ್ ಅವರ ಮೇಲೆ ಸಾಕಷ್ಟು ಟ್ರೋಲ್ ಗಳನ್ನು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮೊಹಮದ್ ಸಿರಾಜ್ ಅವರು ವಿಡಿಯೋ ಮೂಲಕ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು.
ಟೀಮ್ ಇಂಡಿಯಾ ಪರವಾಗಿ ನಾನು ಟೆಸ್ಟ್ ಪಂದ್ಯವನ್ನು ಆಡಬೇಕು, ಟೆಸ್ಟ್ ಕ್ರಿಕೆಟ್ ನಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂದು ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದರು ಸಿರಾಜ್.. ಇದೀಗ ಸಿರಾಜ್ ಅವರು ಆಸೆ ಪಟ್ಟಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಅವರಿಗೆ ಅವಕಾಶ ಲಭಿಸಿದೆ. ಟೀಮ್ ಇಂಡಿಯಾ ಪರ ಟೆಸ್ಟ್ ಆಡುವ ಸಿರಾಜ್ ಅವರ ಕನಸು ನನಸಾಗಿದ್ದು, ಅವರು ಹೇಳಿದಂತೆ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಗಳನ್ನು ಪಡೆದುಕೊಂಡು ಸಿರಾಜ್ ಮಿಂಚಿದ್ದಾರೆ.
ಅಂದು ಸಿರಾಜ್ ಅವರು ಐಪಿಎಲ್ ವೇಳೆ ಟೆಸ್ಟ್ ಆಡಬೇಕು ಅದರಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಹೇಳಿದ್ದರು ಇದೀಗ ಅದನ್ನು ಅವರು ಸಾಬೀತು ಪಡಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಕನಸು ಕಾಣುವುದಲ್ಲ ಮುಖ್ಯ ಅದನ್ನು ಸಾಧಿಸುವುದು ಮುಖ್ಯ ಎಂಬುದನ್ನು ಸಿರಾಜ್ ಅವರು ಸಾಬೀತುಪಡಿಸಿದ್ದಾರೆ.. ಇದೀಗ ಸಿರಾಜ್ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿರಾಜ್ ಅವರ ಸಕ್ಸಸ್ ಕಥೆಯನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ..