ನಟ ದಿ. ರೆಬಲ್ ಸ್ಟಾರ್ ಅಂಬರೀಶ್ ಅವರ ಸಹೋದರ ಎಂ.ಹೆಚ್. ಆನಂದ್ ಕುಮಾರ್ ಉಸಿರಾಟದ ತೊಂದರೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪತ್ನಿ ಹಾಗೂ ಮೂವರು ಮಕ್ಕಳನ್ನು ಆನಂದ್ ಕುಮಾರ್ ಅಗಲಿದ್ದಾರೆ. ಅವರ ಪುತ್ರ ಅಮೆರಿಕದಲ್ಲಿದ್ದು, ಅವರು ಬಂದ ಬಳಿಕ ಸೋಮವಾರ ಅಂತ್ಯಕ್ರಿಯೆ ನೆರವೇರಲಿದೆ. ಆನಂದ್ ಕುಮಾರ್ ಮೈಸೂರಿನಲ್ಲಿ ನೆಲೆಸಿದ್ದರು.ಉಸಿರಾಟದ ಸಮಸ್ಯೆ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.