ಅಂಬಾಸಿಡರ್ ಕಾರು ಪ್ರಿಯರಿಗೆ ಇಲ್ಲಿದೇ ‘ಗುಡ್ ನ್ಯೂಸ್’

Date:

ಭಾರತದಲ್ಲಿ ಅಂಬಾಸಿಡರ್‌ ಕಾರ್‌ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? 90 ರ ದಶಕ ಅಥವಾ ಅದರ ಹಿಂದಿನವರ ಕನಸಿನ ಕಾರೆಂದರೆ ಅದು ಅಂಬಾಸಿಡರ್. ಆದರೆ ಇಂದಿನ ದಿನಮಾನದಲ್ಲಿ ಅದಕ್ಕೆ ಮೌಲ್ಯ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೊಂದು ಅವತರಣಿಕೆಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧತೆ ನಡೆಸಿದೆ.

ಹೌದು, ಫ್ರೆಂಚ್‌ ಮೂಲದ ಪಿಎಸ್‌ಎ ಪಿಯೋಜೆಟ್‌ ಸಿಟ್ರೋನ್‌ ಎನ್ನುವ ಆಟೋಮೋಟಿವ್‌ ಸಂಸ್ಥೆ ಅಂಬಾಸಿಡರ್ ಕಾರನ್ನು ಎಲೆಕ್ಟ್ರಿಕ್‌ ಎಂಜಿನ್‌ ನಲ್ಲಿ ಹೊರತರಲು ಸಿದ್ಧತೆ ನಡೆಸಿಕೊಂಡಿದೆ. ಕಂಪನಿ ಇದೇ ಕಾರನ್ನು ಎಸ್‌ಯುವಿ ಶೈಲಿಯಲ್ಲಿ 2022ರ ವೇಳೆಗೆ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಹಿಂದೂಸ್ತಾನ್‌ ಮೋಟರ್ಸ್‌ ಹೆಸರಿನಲ್ಲಿದ್ದ ಈ ಕಾರಿನ ಪೇಟೆಂಟ್‌ ನ್ನು ಇದೀಗ ಫ್ರೆಂಚ್‌ ಮೂಲದ ಸಂಸ್ಥೆ ತೆಗೆದುಕೊಂಡಿದೆ.ಮೂಲಗಳ ಪ್ರಕಾರ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಿ ಕಾಮನ್‌ ವೆಲ್ತ್‌ ದೇಶಗಳಿಗೆ ಈ ಕಾರು ಬರಲು ಮೂರು ವರ್ಷ ಆಗಲಿದೆ. ಪ್ರಮುಖವಾಗಿ ನಷ್ಟದಲ್ಲಿರುವ ಅಂಬಾಸಿಡರ್ ಸಂಸ್ಥೆಯನ್ನು ಲಾಭದತ್ತ ತರುವ ಉದ್ದೇಶದಿಂದಲೇ ಈ ತಯಾರಿಕೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ.

 

Share post:

Subscribe

spot_imgspot_img

Popular

More like this
Related

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌ ಬೆಳಗಾವಿ:“ನಾನು ನೀರಾವರಿ...

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್ ಬೆಳಗಾವಿ:...

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ ಬೆಳಗಾವಿ: ರಾಜ್ಯದಲ್ಲಿ ಕೃಷಿ...

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...