ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಇಡೀ ಇಂಡಸ್ಟ್ರಿಗೆ ಅಚ್ಚುಮೆಚ್ಚು. ಎಷ್ಟೇ ಬೈಯ್ತಿದ್ರೂ ಕಷ್ಟ ಅಂತ ಹೋದಾಗ ಕೈಹಿಡಿತಾರೆ ಎಂಬ ನಂಬಿಕೆ. ಅಂಬಿ ಕೂಡ ಅದೇ ರೀತಿ ಇದ್ರು ಬಿಡಿ. ಆಗ ಅಂಬರೀಶ್ ಇಲ್ಲ. ಆದ್ರೂ ಅವರ ಮೇಲಿನ ಅಭಿಮಾನ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ.
ಹಾಗಾಗಿಯೇ ಮಂಡ್ಯದಲ್ಲಿ ಸುಮಲತಾ ಅವರಿಗೆ ಭರ್ಜರಿ ಬೆಂಬಲ ಸಿಕ್ಕಿದೆ. ಈ ಶಕ್ತಿಯ ಜೊತೆ ಸುಮಲತಾ ಅವರಿಗೆ ಇನ್ನೂ ನಾಲ್ಕು ಶಕ್ತಿಗಳು ಜೊತೆಯಲ್ಲಿವೆ. ಅದು ಯಾವುದು ಎಂದು ನೋಡಿದ್ರೆ, ಆ ನಾಲ್ಕು ಜನ ಕಾಣ್ತಾರೆ.
ಹೌದು, ಈ ನಾಲ್ಕು ಜನರು ಅಂದಿನಿಂದ ಇಂದಿನವರೆಗೂ ಅಂಬರೀಶ್ ಹಾಗೂ ಅಂಬಿ ಕುಟುಂಬದ ಜೊತೆ ನಿಂತಿದ್ದಾರೆ. ಅದಕ್ಕೆ ಕಾರಣ ಅಂಬಿ ಮೇಲಿನ ಪ್ರೀತಿ ಮತ್ತು ಅವರು ಮಾಡಿದ ಸಹಾಯ. ಅಂಬಿಯಿಲ್ಲದ ಸುಮಲತಾ ಅವರಿಗೆ ಬೆಂಬಲವಾಗಿ, ಶಕ್ತಿಯಾಗಿ ನಿಂತಿರುವುದು ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಯಶ್ ಹಾಗೂ ದರ್ಶನ್.
ಅಂದು ಅಂಬರೀಶ್ ಸತ್ತಾಗಲೂ ಈ ನಾಲ್ಕು ಜನ ಅಂತಿಮ ಕ್ಷಣದವರೆಗೂ ಸುಮಲತಾ ಮತ್ತು ಅಭಿಷೇಕ್ ಜೊತೆಯಲ್ಲೇ ಇದ್ದರು. ಶೂಟಿಂಗ್ ನಿಮಿತ್ತ ವಿದೇಶದಲ್ಲಿ ದರ್ಶನ್ ಓಡೋಡಿ ಬಂದರು. ರಾತ್ರಿಯೆಲ್ಲಾ ಆಸ್ಪತ್ರೆ, ಮನೆ, ಕಲಾವಿದರ ಸಂಘ ಅಂತಹ ಯಶ್ ಓಡಾಡುತ್ತಿದ್ದರು. ರಾಕ್ ಲೈನ್ ಮತ್ತು ದೊಡ್ಡಣ್ಣ ಅಂತೂ ಅಂಬಿ ಪಾರ್ಥಿವ ಶರೀರ ಬಿಟ್ಟು ಎಲ್ಲೂ ಹೋಗೇ ಇಲ್ಲ.