15 ದಿನಗಳ ಹಿಂದೆ ಊರಿನ ಶಿವಣ್ಣ ಎಂಬವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಎಲ್ಲಿಗೂ ಹೋಗಿದ್ದರು, ಇದೇ ವೇಳೆ ಶಿವಣ್ಣನವರು ಕಾಣಿಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡುತ್ತಿದ್ದ ವೇಳೆಯಲ್ಲಿ ಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿದೆ, ಇದೇ ವೇಳೆ ಪೊಲೀಸರು ಶಿವಣ್ಣನ ಸಂಬಂಧಿಕರಿಗೆ ಅಪರಿಚತ ಶವ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿ ಬಂದು ಪರಿಶೀಲನೆ ಮಾಡುವಂತೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು ಬಂದು ಅಪರಿಚಿತ ಶವವನ್ನು ನೋಡಿದ ಶಿವಣ್ಣನ ಸಂಬಂಧಿಕರು ಇದು ಶಿವಣ್ಣನಂದೇ ಮೃತದೇಹ ಅಂತ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ.ಇನ್ನು ಅಂತ್ಯಕ್ರಿಯೆ ನಡೆದ ಎರಡು ದಿವಸದ ಬಳಿಕ ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿದೆ. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಶಿವಣ್ಣನೆಂದು ಭಾವಿಸಿ ಹೂತ್ತಿದ್ದ ಹೆಣ ಯಾರದ್ದು ಅನ್ನೊಂದು ಈಗ ಯಕ್ಷ ಪ್ರಶ್ನೆಯಾಗಿದೆ.