ಅತೀ ಶೀಘ್ರದಲ್ಲಿ ಹಾಸನ ಸಂಸದರು ಬರಲಿ ಅಂತ ನಾವು ಕೂಡ ಕೇಳಿಕೊಳ್ತೀವಿ !

0
28

ಬೆಂಗಳೂರು: ಒಬ್ಬ ಪ್ರಜೆಯಾಗಿ ನಾನು ಕೇಳಿಕೊಳ್ಳೋದು, ಆರೋಪ ಬಂದಿರೋ ಸಮಯದಲ್ಲಿ ಬಂದು ತನಿಖೆ ಎದುರಿಸಬೇಕು, ಹಾಸನ ಸಂಸದರು ವಿದೇಶದಿಂದ ತನಿಖೆ ಎದುರಿಸೋದು ಸೂಕ್ತ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹಾಸನ ಸಂಸದರಿಗೆ ನೇರವಾಗಿ ಬಂದು SIT ತನಿಖೆ ಎದುರಿಸುವಂತೆ ಮನವಿ ಮಾಡಿದ್ರು.
ಧೈರ್ಯವಾಗಿ ತನಿಖೆ ಎದುರಿಸಿ ಅಂತ ಇಡೀ ಸಮಾಜಕ್ಕೆ ಸಂದೇಶ ಕೊಟ್ಟಿರು. ನಾವೂ ಕೂಡಾ ಸಂಸದರು ಬರಬಹುದು ಅಂತ ಕಾಯ್ತಿದ್ದೇವೆ ಎಂದಿದ್ದಾರೆ. ನನ್ನ ಅಭಿಪ್ರಾಯವೂ ಅದೇ ಆಗಿದೆ. ಒಬ್ಬ ಪ್ರಜೆಯಾಗಿ ನಾನು ಕೇಳಿಕೊಳ್ಳೋದು, ಆರೋಪ ಬಂದಿರೋ ಸಮಯದಲ್ಲಿ ಬಂದು ತನಿಖೆ ಎದುರಿಸಬೇಕು. ಹಾಸನ ಸಂಸದರು ವಿದೇಶದಿಂದ ತನಿಖೆ ಎದುರಿಸೋದು ಸೂಕ್ತ. ಅತೀ ಶೀಘ್ರದಲ್ಲಿ ಅವರು ಬರಲಿ ಅಂತ ನಾವು ಕೂಡ ಕೇಳಿಕೊಳ್ತೀವಿ ಎಂದು ಹೇಳಿದ್ದಾರೆ.