ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!

Date:

ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!

ಅಕ್ರಮ ಸಂಬಂಧ ಶಂಕಿಸಿ ಮಹಿಳೆ ಮೇಲೆ ಆಕೆಯ ಅಳಿಯನೇ ಕ್ರೌರ್ಯ ಮೆರೆದಿದ್ದಾನೆ. ಆಕೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹಿಂಸಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೆ ಈ ಹೃದಯವಿದ್ರಾವಕ ಘಟನೆ ನಡೆದಿರೋದು ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ.

ಆರೋಪಿಗಳು ಅಕ್ರಮ ಸಂಬಂಧ ಇದೆ ಎಂದು ಸಂಶಯಗೊಂಡು ಮೂರು ಮಕ್ಕಳ ತಾಯಿಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಗುಪ್ತಾಂಗದಲ್ಲಿ ಬಿಯರ್ ಬಾಟಲಿಯನ್ನು ಹಾಕಿ ಅದನ್ನು ಎರಡು ದಿನ ತಂತಿಯಿಂದ ಕಟ್ಟಿದ್ದರು ಎನ್ನಲಾಗಿದೆ.

“ಸಹೋದರಿಯನ್ನು ಕುಚೇರಾ ಗ್ರಾಮದ ನಿವಾಸಿ ಜೊತೆಗೆ ಮದುವೆ ಮಾಡಿಕೊಡಲಾಗಿದೆ. ಆಕೆಗೆ ಮೂವರು ಮಕ್ಕಳಿದ್ದಾರೆ. ಅವರು ಮಾರುಕಟ್ಟೆಯಿಂದ ತಂಬಾಕು ಚೀಲಗಳನ್ನು ಸಂಗ್ರಹಿಸಲು ಹಳ್ಳಿಯಿಂದ ಒಬ್ಬ ವ್ಯಕ್ತಿಯನ್ನು ಕಳುಹಿಸಿದ್ದಳು. ಇದು ಸಹೋದರಿಯ ಅಳಿಯನ ಕೋಪಕ್ಕೆ ಕಾರಣವಾಗಿತ್ತು.  ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ. ಜೂನ್ 18ರಂದು ಆರೋಪಿಯು (ಆಕೆಯ ಅಳಿಯ) ಕೆಲಸದ ನೆಪದಲ್ಲಿ ಜಮೀನಿನಲ್ಲಿದ್ದ ಸಹೋದರಿಯನ್ನು ಕರೆದು, ಕಬ್ಬಿಣದ ರಾಡ್‍ನಿಂದ ಹೊಡೆದು ಹಲ್ಲೆ ಮಾಡಿದ್ದರು” ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾರೆ.

 

“ ಅಷ್ಟೇ ಅಲ್ಲದೆ ಸಹೋದರಿಯನ್ನು ಕಬ್ಬಿಣದ ತಂತಿಯಿಂದ ಕಟ್ಟಿ ಹಾಕಿ ರಾಡ್ ಬಿಸಿ ಬರೆ ಕೊಟ್ಟಿದ್ದರು. ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಲ್ಲದೆ, ಬೀಯರ್ ಬಾಟಲ್ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ನೋವು ಮತ್ತು ಕಿರುಕುಳದಿಂದ ಆಕೆ ಕಿರುಚಲು ಪ್ರಾರಂಭಿಸಿದಾಗ ಬಟ್ಟೆಯಿಂದ ಬಾಯಿ ಮುಚ್ಚಿದ್ದರು. ಸಹೋದರಿ ಪ್ರಜ್ಞೆ ತಪ್ಪಿದ ನಂತರ ಗುಡಿಸಲಿನಲ್ಲಿ ಬಿಟ್ಟು, ಅವಳು ಸತ್ತಿದ್ದಾಳೆಂದು ಗ್ರಾಮದಲ್ಲಿ ಬಿಂಬಿಸಿದ್ದರು. ಅಳಿಯ, ಮಾವ, ಅತ್ತೆ ಸೇರಿ ಈ ಕ್ರೌರ್ಯ ಎಸಗಿದ್ದಾರೆ’’ ಎಂದು ಹೇಳಿದ್ದಾರೆ.

ಜೂನ್ 19ರಂದು ಸಂತ್ರಸ್ತೆ ಪ್ರಜ್ಞೆ ಮರಳಿದ್ದಳು. ತನ್ನನ್ನು ಬಿಡುವಂತೆ ಆರೋಪಿಗಳಿಗೆ ಮನವಿ ಮಾಡಿಕೊಂಡಿದ್ದಳು. ನಿಮ್ಮ ಕೃತ್ಯದ ಕುರಿತು ಯಾರಿಗೂ ಏನನ್ನೂ ಹೇಳುವುದಿಲ್ಲ. ದಯವಿಟ್ಟು ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಳು. ಆದರೆ ಆರೋಪಿಗಳು ಅವಳನ್ನು ಬಿಟ್ಟಿರಲಿಲ್ಲ. ಆರೋಪಿಗಳು ಹೊಲದಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದರು. ಈ  ಬಗ್ಗೆ ಮಹಿಳೆಯ ಸಹೋದರನಿಗೆ ಜೂನ್ 21ರಂದು ಮಾಹಿತಿ ಲಭಿಸಿತು. ಕೂಡಲೇ ಸಹೋದರಿಯನ್ನು ಕರೆದುಕೊಂಡು ಹೋಗಲು ಕುಟುಂಬದೊಂದಿಗೆ ಜಮೀನಿಗೆ ಹೋದೆ. ಆರೋಪಿಗಳು ಆಕೆಯನ್ನು ಬಿಡಲು ಒಪ್ಪಲಿಲ್ಲ. ನಂತರ ಗ್ರಾಮಸ್ಥರ ನೆರವಿನಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಘಟನೆ ಬಗ್ಗೆ ವಿವರಿಸಿದ್ದಾರೆ.

ಮಹಿಳೆಯ ಪತಿ ಔಷಧಿ ತರಲು ಬಿಕಾನೆರ್ ಗೆ ಹೋಗಿದ್ದಾಗ ಸಂತ್ರಸ್ತೆಯ ಅಳಿಯ, ಮಾವ, ಅತ್ತೆ ಸೇರಿ ಐವರು ಕೃತ್ಯ ಎಸೆಗಿದ್ದಾರೆ. ಸಂತ್ರಸ್ತೆಯನ್ನು ಮೂರು ದಿನಗಳ ಕಾಲ ನಾಗೌರ್ ನ ಜೆಎಲ್‍ಎನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಜೋಧಪುರಕ್ಕೆ ಕರೆದೊಯ್ಯಲಾಗಿದೆ. ಐದು ಆರೋಪಿಗಳಲ್ಲಿ  ಒಬ್ಬನನ್ನು ಮಾತ್ರ ಬಂಧಿಸಲಾಗಿದೆ ಎಂದು ವರದಿಯಾಗಿದೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...