ಎಂತೆಂಥಾ ನೀಚ ಜನ ಇರುತ್ತಾರೆ ನೋಡಿ. ಇಲ್ಲೊಂದು ಗುಂಪು ಸತ್ ಚಾರಿತ್ರ್ಯವಂತರಂತೆ ಬಂದು ಮಹಿಳೆಯನ್ನು ರಕ್ಷಿಸಿ, ಬಳಿಕ ಅವರೇ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ನಡೆದಿರುವುದು ನೋಯ್ಡಾದಲ್ಲಿ.
ಕೆಲಸ ಹುಡುಕಿಕೊಂಡು ಬಂದಿದ್ದ 22 ವರ್ಷದ ಮಹಿಳೆ ತನ್ನ ಸಹೋದರ ಸ್ನೇಹಿತನನ್ನು ಕೆಲಸಕ್ಕಾಗಿ ಒಂದು ಪಾರ್ಕಲ್ಲಿ ಮೀಟಾಗಲು ತೆರಳಿದ್ದರು. ಈ ವೇಳೆ ಸೋದರನ ಸ್ನೇಹಿತ ಎನಿಸಿಕೊಂಡ ಆಸಾಮಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾನೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಒಂದು ಗುಂಪು ಆಕೆಯನ್ನು ಆತನಿಂದ ಬಚಾವ್ ಮಾಡಿದ್ದಾರೆ. ಅದಾದ ಮೇಲೆ ಗುಂಪಿನಲ್ಲಿದ್ದ ಕಾಮುಕ ಮಂದಿ ಸೇರಿ ಆಕೆಯ ಮೇಲೆ ಅತ್ಯಾಚರ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಒಂದೆಡೆ ಸಹೋದರನ ಸ್ನೇಹಿತನೆಂಬ ಕಾಮುಕನ ದೌರ್ಜನ್ಯ..ಅವನಿಂದ ಬಚಾವ್ ಮಾಡಿ ಬಳಿಕ ಅತ್ಯಾಚಾರ ಎಸಗಿದ ಸಾಚಾ ಮುಖವಾಡ ಧರಿಸಿರುವ ಕಾಮುಕರು! ನಿಜಕ್ಕೂ ಬೇಸರ ಮತ್ತು ಆತಂಕಕಾರಿ ಘಟನೆ. ಹೀಗಾದಲ್ಲಿ ಹೆಣ್ಣು ಯಾರನ್ನು ನಂಬ ಬೇಕು?