ಅದು ಟಾಪ್ ಸೀಕ್ರೆಟ್ ಅದನ್ನು ಹೇಳಿದರೆ ಚೆನ್ನೈ ತಂಡ ನನ್ನನ್ನ ಖರೀದಿಸುವುದಿಲ್ಲ..!?

Date:

ಇದನ್ನು ನನಗೆ ಈಗಲೇ ಕೇಳಬೇಡಿ ನಿವೃತ್ತಿ ಆದ್ಮೇಲೆ ಕೇಳಿ ಅಂತ ಧೋನಿ ಹೇಳಿದ್ದಾರೆ, ಅದು ಯಾಕೆ ಅಂತೀರ..? ಈ ಸ್ಟೋರಿ ಓದಿ..

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಐಪಿಎಲ್ ಮೊದಲ ಆವೃತ್ತಿಯಿಂದಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು 12 ಆವೃತ್ತಿಗಳಲ್ಲಿ 10 ಬಶಾರಿ ಪ್ಲೇಆಫ್ ಪ್ರವೇಶಿಸಿದೆ, ಇಷ್ಟು ದಾಖಲೆ ಸಂಖ್ಯೆಯಲ್ಲಿ ಪ್ಲೇ ಆಫ್ಸ್ ಪ್ರವೇಶಿಸಿರುವುದರ ಗುಟ್ಟೇನು ಎಂದು ಹರ್ಷ ಬೋಗ್ಲೆ ಕೇಳಿದ ಪ್ರಶ್ನೆಗೆ ಧೋನಿ ಅತ್ಯಂತ ಚಾಣಾಕ್ಷತನದ ಉತ್ತರ ನಿಡಿದ್ದಾರೆ.

ಮಂಗಳವಾರ ನಡೆದ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಚೆನೈ ಜಯದ ನಗುವನ್ನು ಬೀರಿತ್ತು ಶೇನ್ ವ್ಯಾಟ್ಸನ್‌ ಅಮೋಘ 96 ರನ್‌ಗಳನ್ನು ಗಳಿಸುವುದರ ಮೂಲಕ ಚೆನೈ ತಂಡದ ಗೆಲುವಿನ ರೂವಾರಿಯಾದರು. ಈ ಮೂಲಕ ಸಿಎಸ್ ಕೆ ‌ಪ್ಲೇಆಫ್ ಅರ್ಹತೆಯನ್ನು ಬಹುತೇಕ ಖಚಿತ ಪಡಿಸಿಕೊಂಡಿತ್ತು.

ಇಷ್ಟು ಬಾರಿ ಚೆನೈ ತಂಡ ಪ್ಲೇ ಆಫ್ ಪ್ರವೇಶಿಸುವುದರ ಹಿಂದಿನ ಗುಟ್ಟೇನು ಎಂದು ಹರ್ಷ ಬೋಗ್ಲೆ ಕೇಳಿದಾಗ, ಇದು ಟ್ರೇಡ್‌ ಸೀಕ್ರೆಟ್ ಈ ರಹಸ್ಯವನ್ನು ಬಿಟ್ಟುಕೊಟ್ಟರೆ ಆಟಗಾರರ ಹರಾಜಿನಲ್ಲಿ ಸಿಎಸ್ ಕೆ ಫ್ರಾಂಚೈಸಿಗಳು ನನ್ನನ್ನು ಖರೀದಿಸುವುದಿಲ್ಲ,

ತಂಡದ ಯಶಸ್ಸಿಗೆ ಶ್ರಮಿಸಿರುವ ತಂಡದ ಸಹಾಯಕ ಸಿಬ್ಬಂದಿಗೆ ಇದರ ಬಹುಪಾಲು ಕೀರ್ತಿ ಸಲ್ಲಬೇಕು. ಇನ್ನು ಮಿಕ್ಕಿದ್ದನ್ನು ನಾನು ನಿವೃತ್ತಿ ಆದ ಬಳಿಕ ಹೇಳುತ್ತೇನೆ ಎಂದು ಅತ್ಯಂತ ಜಾಣ್ಮೆಯಿಂದ ಉತ್ತರವನ್ನು ನೀಡಿದ್ರು ಧೋನಿ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...