ಎಷ್ಟೇ ಪ್ರತಿಭೆಯಿದ್ದರೂ ಅದೃಷ್ಟ ಎನ್ನುವುದು ಸ್ವಲ್ಪವಾದರೂ ಬೇಕಾಗುತ್ತದೆ. ಅದೃಷ್ಟ ಚೆನ್ನಾಗಿದ್ದರೆ ಎಂಥೆಂಥಾ ಯಶಸ್ಸು ಬೇಲಾದರೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಅದೃಷ್ಟ ಮತ್ತು ಪ್ರತಿಭೆ ಎರಡೂ ಇದ್ದರಂತು ಜೀವನ ಸೂಪರ್…ಮುಟ್ಟಿದ್ದೆಲ್ಲಾ ಚಿನ್ನ . ಕೆಲವೊಮ್ಮೆ , ಕೆಲವೊಬ್ಬರ ವಿಷಯದಲ್ಲಿ ಪ್ರತಿಭೆ ಶೂನ್ಯವಾಗಿದ್ದರೂ ಅದೃಷ್ಟ ನೆಟ್ಟಗೆ ಇದ್ದರೆ ಪುಕ್ಕಟೆ ಯಶಸ್ಸು ಬಂದು ಬರುತ್ತದೆ. ಅದು ಶಾಶ್ವತ ಅಲ್ಲ ಎನ್ನುವುದು ಬೇರೆ ಪ್ರಶ್ನೆ ಬಿಡಿ. ಆದರೆ,ಕೆಲವರಲ್ಲಿ ಎಷ್ಟೇ ಪ್ರತಿಭೆಯಿದ್ದರೂ ಅದೃಷ್ಟ ಕೈಕೊಟ್ಟು ಸೋಲಿನ ಸುಳಿಯಲ್ಲಿ ಈಜುತ್ತಾರೆ.
ಈಗ ಇಲ್ಲಿ ಪ್ರತಿಭೆ, ಯಶಸ್ಸು ಅಂತೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಯುವರಾಜ್ ಸಿಂಗ್ ಎಂಬ ದೈತ್ಯ ಪ್ರತಿಭೆ..! ವಿಶ್ವ ಕ್ರಿಕೆಟ್ ಕಂಡ ಅದ್ಭುತ ಆಲ್ ರೌಂಡರ್…! ವಿಶ್ವವೇ ಮೆಚ್ಚಿದ ವಿಶ್ವಕಪ್ ಹೀರೋ..!
ಹೌದು ಇಡೀ ವಿಶ್ವವೇ ವಿಶ್ವಕಪ್ ಹೀರೋ ಯುವಿಯನ್ನು ಕೊಂಡಾಡುತ್ತದೆ. ಕ್ಯಾನ್ಸರ್ ನಡುವೆಯೂ ಹೋರಾಡಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಹೀರೋ ಯುವರಾಜ್ ಸಿಂಗ್. ಯುವಿಯ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 2011ರಲ್ಲಿ ವಿಶ್ವಕಪ್ ಗೆದ್ದಿತ್ತು.
ಕ್ಯಾನ್ಸರ್ ಗೆದ್ದು ಬಂದ ಬಳಿಕವೂ ಯುವಿ ಟೀಮ್ ಇಂಡಿಯಾ ಸೇರಿಕೊಂಡರು. ಆದರೆ ಕಾಯಂ ಆಗಿ ಉಳಿಯಲು ಸಾಧ್ಯವಾಗಿಲ್ಲ. ಯುವಿ 2015 ರ ವರ್ಲ್ಡ್ ಕಪ್ ಗೆ ಆಯ್ಕೆಯಾಗಲಿಲ್ಲ. ಈಗ 2019ರ ವಿಶ್ವಕಪ್ ಗೂ ಕಡೆಗಾಣಿಸಲ್ಪಟ್ಟಿದ್ದಾರೆ. ಅಷ್ಟೇ ಏಕೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಯುವಿಗೆ ಆಡುವ 11 ರ ಬಳಗದಲ್ಲಿ ಸ್ಥಾನ ನೀಡದೆ ಬೆಂಚ್ ಕಾಸಲು ಬಿಡುತ್ತಿದ್ದಾರೆ. ಇದು ಯುವಿಗೆ ಮಾಡುತ್ತಿರುವ ಅವಮಾನ ಅಲ್ಲದೆ ಮತ್ತೇನು. ಒಂದಿಷ್ಟು ಅವಕಾಶ ನೀಡಬಹುದಲ್ಲವೇ.? ಯುವಿ ನಿಜಕ್ಕೂ ಪ್ರತಿಭಾವಂತ ಕ್ರಿಕೆಟಿಗರು..ಕ್ರಿಕೆಟ್ ಲೋಕದ ದಿಗ್ಗಜರಲ್ಲಿ ಒಬ್ಬರು. ಅವರಿಗೆ ಅವಕಾಶ ನೀಡಬೇಕು. ಆದರೆ, ಅದೃಷ್ಟಕೆಟ್ಟಿದೆ, ಸ್ವಲ್ಪ ಯಶ ಅಂದರೆ ಫಾರ್ಮ್ ಕಳೆದುಕೊಂಡಿದ್ದಾರೆ ಅದಕ್ಕಾಗಿ ಯುವಿ ಜೊತೆಗೆ ಯಾರೂ ಇಲ್ಲ.ಯುವಿ ಏನು ಎಂದು ಎಲ್ಲರಿಗೂ ಗೊತ್ತಿದ್ದರೂ ಅವಕಾಶ ಸಿಗುತ್ತಿಲ್ಲ.
ಅದೃಷ್ಟ, ಯಶ ನಮ್ ಕಡೆ ಇದ್ದಾಗ ಮಾತ್ರ ಎಲ್ಲರೂ ನಮ್ಮ ಕಡೆ ಇರುತ್ತಾರೆ ಅನ್ನೋದಕ್ಕೆ ಯುವಿಯೇ ಸಾಕ್ಷಿ..!
Date: