ಅದ್ದೂರಿ 2ಗೆ ಧ್ರುವ ಬದಲು ಹೊಸ ಹೀರೋ..!

Date:

ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ, ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಅದ್ದೂರಿ. 2012ರಲ್ಲಿ ತೆರೆಕಂಡ ಈ ಸಿನಿಮಾ ಮೂಲಕ ಧ್ರುವ ಸ್ಯಾಂಡಲ್​ವುಡ್​ ಗೆ ಅದ್ದೂರಿಯಾಗಿಯೇ ಎಂಟ್ರಿಕೊಟ್ಟಿದ್ದರು. ಧ್ರುವ ತನ್ನ ಮೊದಲ ಚಿತ್ರದಲ್ಲೇ ಭಾರೀ ಯಶಸ್ಸನ್ನು ಕಂಡಿದ್ದರು, ಧ್ರುವ ಅವರ ಸಿನಿ ಜರ್ನಿ ಈ ಸಿನಿಮಾ ಮೂಲಕವೇ ಶುಭಾರಂಭಗೊಂಡಿತ್ತು. ರಾಧಿಕಾ ಪಂಡಿತ್, ಧ್ರುವ ನಟೆನಯ ಈ ಬ್ಲಾಕ್​ ಬಸ್ಟರ್ ಮೂವಿಗೆ ಆ್ಯಕ್ಷನ್ ಕಟ್ ಹೇಳಿದ್ದರು ಎ.ಪಿ ಅರ್ಜುನ್.
ಈಗ ಅದ್ದೂರಿ 2 ಬರಲಿದೆ. ಒಂದು ಸಿನಿಮಾದ ಸೀಕ್ವೆಲ್ಸ್ ಬರುತ್ತದೆ ಎಂದರೆ ಅದೇ ಮೊದಲ ಭಾಗದ ಟೀಮೇ ಅದರಲ್ಲೂ ಅದೇ ಹೀರೋ ಇರುತ್ತಾರೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆ ಅಭಿಪ್ರಾಯದಂತೆ ಅದ್ದೂರಿ 2ಗೆ ಧ್ರುವ ಅವರೇ ಹೀರೋ ಆಗುತ್ತಾರೆ ಎಂಬ ಮಾತು ಬರುವುದು ಕಾಮನ್. ಆದರೆ ಧ್ರುವ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಏಕೆಂದರೆ ಧ್ರುವ ಅದ್ದೂರಿ 2 ನ ಹೀರೋ ಅಲ್ಲ.


ಧ್ರುವ ಅವರ ಬದಲು ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅದ್ದೂರಿ 2ನ ನಾಯಕ, ಈ ಸಿನಿಮಾದ ಮೂಲಕ ನಿರಂಜನ್ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಇವರು ಇದಕ್ಕು ಮೊದಲು ಪ್ರಿಯಾಂಕ ಉಪೇಂದ್ರ ಅವರ ಸೆಕೆಂಡ್ ಹಾಫ್ ಸಿನಿಮಾದಲ್ಲಿ ನಟಿಸಿದ್ದರು. ಈಗ ನಾಯಕನಾಗಿ ಅದ್ದೂರಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಗಟ್ಟಿಯಾಗಿ ನೆಲೆ ನಿಲ್ಲಲು ಉತ್ಸುಕರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...