ಚಿಕ್ಕಬಳ್ಳಾಪುರ: ಅಧಿಕಾರಕ್ಕಾಗಿ ನಾನು ಅಂಟಿಕೊಂಡಿರಲಿಲ್ಲ. ನಾನು ಜನ ರೈತರ ಪರ ನಿಂತಿದ್ದೀನಿ ಎಂದು ಮಾಜಿ ಸಚಿವ ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಹೋದಾಗ ನಾನು ರಾಜೀನಾಮೆ ಕೊಡಲಿಲ್ವಾ?, ಅಧಿಕಾರಕ್ಕಾಗಿ ನಾನು ಅಂಟಿಕೊಂಡಿರಲಿಲ್ಲ. ನಾನು ಜನ ರೈತರ ಪರ ನಿಂತಿದ್ದೀನಿ ಅಂತ ಟಾಂಗ್ ನೀಡಿದರು. ಎಚ್ ಎನ್ ಕೆಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಅಂತ ಆಗ್ರಹಿಸಿದೆ.
ನೇರವಾಗಿ ಬಳಸಿದ್ರೆ ಆ ನೀರು ಮಾರಕ, ತಕ್ಷಣ ನೀವು ಹಾಲು ಒಕ್ಕೂಟ ಮರುಸ್ಥಾಪನೆ ಮಾಡಬೇಕು. ಮೂರನೇ ಹಂತದ ಶುದ್ಧೀಕರಣ ಆಗಬೇಕು. ಇವರು ನಾನು ಇದ್ದಾಗ ಆದ ಕಟ್ಟಡ ಅಷ್ಟೇ ಇದೆ, ಮೆಡಿಕಲ್ ಕಾಲೇಜು ಗೋಪುರ ಕೂಡ ಕಂಪ್ಲೀಟ್ ಮಾಡಿಲ್ಲ, ಆಸ್ಪತ್ರೆ ಮಾಡಲು ಯೋಗ್ಯತೆ ಇಲ್ಲ. ಇವರಿಗೆ ಏನ್ ಕಡಿದು ಕಟ್ಟೆ ಹಾಕಿದಂಗೆ ಕಾರ್ಯಕ್ರಮ ಮಾಡ್ತಾರೆ. ಮಕ್ಕಳ ಜೊತೆ ಮಾತಾಡಿಕೊಂಡು ಪೋಸ್ ಕೊಡ್ತಾರೆ. ನಾಚಿಕೆ ಅಗಲ್ವಾ..? ನಿಮ್ಮ ಕೊಡುಗೆ ಏನು..? ಅಂತ ವಾಗ್ದಾಳಿ ನಡೆಸಿದರು.
ಅಧಿಕಾರಕ್ಕಾಗಿ ನಾನು ಅಂಟಿಕೊಂಡಿರಲಿಲ್ಲ !
Date: