ಖ್ಯಾತ ಚಿತ್ರನಟ , ಎಂತಹ ಪಾತ್ರವನ್ನು ಕೊಟ್ಟರೂ ಸಹ ಸುಲಲಿತವಾಗಿ ಅಭಿನಯಿಸಬಲ್ಲ ನಟ ಪ್ರಕಾಶ್ ರೈ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕೆಜಿಎಫ್ 2 ನಲ್ಲಿ ಅಭಿನಯಿಸುತ್ತಿರುವ ನಟ ಪ್ರಕಾಶ್ ರೈ ಅವರಿಗೆ ಕೆಜಿಎಫ್ 2 ಚಿತ್ರತಂಡ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ. ದಿನ ಪತ್ರಿಕೆಯೊಂದರಲ್ಲಿ ಸುದ್ದಿ ಇರುವ ಹಾಗೆ ಪ್ರಕಾಶ್ ರೈ ಅವರ ಫೋಟೋವನ್ನು ಹಾಕಿ ವಿಜಯೇಂದ್ರ ಇಂಗಳಗಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ.
ಈ ಮೂಲಕ ಪ್ರಕಾಶ್ ರೈ ಅವರು ಅನಂತ್ ನಾಗ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಸಾಬೀತಾಗಿದೆ ಏಕೆಂದರೆ ಕೆಜಿಎಫ್ ಮೊದಲನೇ ಭಾಗದಲ್ಲಿ ಅನಂತ್ ನಾಗ್ ಅವರು ನಿರ್ವಹಿಸಿದ್ದು ಆನಂದ ಇಂಗಳಗಿ ಪಾತ್ರ ಆದರೆ ಪ್ರಕಾಶ್ ರೈ ಅವರು ಎರಡನೇ ಭಾಗದಲ್ಲಿ ನಿರ್ವಹಿಸುತ್ತಿರುವುದು ವಿಜಯೇಂದ್ರ ಇಂಗಳಗಿ ಪಾತ್ರ.
ಹೀಗಾಗಿ ಪ್ರಕಾಶ್ ರೈ ಮತ್ತು ಅನಂತ್ ನಾಗ್ ಇಬ್ಬರೂ ಸಹ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಪಕ್ಕಾ ಆಗಿದ್ದು ಎರಡನೇ ಭಾಗದಲ್ಲಿಯೂ ಸಹ ಅನಂತ್ ನಾಗ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇದೀಗ ಕನ್ನಡಿಗರಲ್ಲಿ ಖುಷಿ ಮೂಡಿಸಿರುವ ವಿಷಯ.