ಬಿಜೆಪಿಗೆ ಸಚಿವ ಸಂಪುಟದ ವಿಸ್ತರಣೆ ಆದ ಬಳಿಕ ಬಿಜೆಪಿಯಲ್ಲಿ ಅತೃಪ್ತ ಶಾಸಕರ ಗುಂಪೊಂದು ರಚನೆಯಾಗಿದೆ ಹಾಗಾಗಿ ಬಿ.ಎಸ್. ಯಡಿಯೂರಪ್ಪ ಅನರ್ಹ ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ನಿಮಗೆ ಅನ್ಯಾಯವಾಗಲು ಬಿಡಲ್ಲ. ಮತ್ತೊಮ್ಮೆ ವಕೀಲರ ಮೂಲಕ ಮನವಿ ಮಾಡಿಸುತ್ತೇವೆ. ಗಂಭೀರವಾಗಿ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಅನರ್ಹ ಶಾಸಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಮಧ್ಯಾಹ್ನ ಕರ್ನಾಟಕ ಭವನದಿಂದ ತೆರಳಿ ಅನರ್ಹ ಶಾಸಕರನ್ನು ಭೇಟಿ ಮಾಡಿದ್ದ ಸಿಎಂ ನಂತರದಲ್ಲಿ ಪ್ರಧಾನಿ ಮೋದಿ ಅವರನ್ನಾಗಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನಾಗಲಿ ಭೇಟಿ ಮಾಡಿಲ್ಲ. ಅವರು ಕರ್ನಾಟಕ ಭವನಕ್ಕೂ ಆಗಮಿಸಿಲ್ಲ. ಹಾಗಾದರೆ ಯಡಿಯೂರಪ್ಪ ಅವರು ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಾ ಇದೆ